Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ ಹರಿನಾಮ ಸುಳಾದಿ
( ವೇದಾಂತವನ್ನರಿತು ಕಠಿಣ ಕರ್ಮಗಳನ್ನಾಚರಿಸುತ್ತಿದ್ದರೂ , ಹರಿನಾಮ ವಿಸ್ಮರಣೆ ಸರ್ವಥಾ ಮಾಡಲಾಗದು .)
ರಾಗ ಕಾಂಬೋಧಿ
ಧ್ರುವತಾಳ
ಹರಿಯೆ ಜಗದ ದೊರೆಯೆ ನಿರುತ ಭಾಗ್ಯದ ಶಿರಿಯೆ
ದುರಿತ ಗಜಕೆ ಹರಿಯೆ ದನುಜಾರಿಯಾ
ಸ್ಮರಣೆಯ ಮಾಡಲರಿಯಾ ಅರಿಯದ ನರಗುರಿಯ
ಕರೆಸಿ ಯಮ ಪರಿಪರಿಯಾ ತೀವರುರಿಯಾ
ನರಕಾದಿಗೆ ಗುರಿಯಾ ನಿರಿಸುವನು ಘನಸಿರಿಯಾ
ವರ ಕಲ್ಪ ಕಲ್ಪಕ್ಕೆ ದೋಷಕಾರಿಯಾ
ದುರತಿಕ್ರಮ ನಾಮ ವಿಜಯವಿಟ್ಠಲನ್ನ
ಮರಿಯಾದಿರೆ ವಿರಂಚಿ ದುರ್ಲೇಖ ಬರಿಯಾ ॥ 1 ॥
ಮಟ್ಟತಾಳ
ಸ್ನಾನ ಜಪ ತಪವು ಮೌನವನುಷ್ಠಾನ
ದಾನ ಪರ್ವಣಿ ಪುಣ್ಯ ಜ್ಞಾನ ಸುಯಾಗಗಳು
ನಾನಾಕ ಯಾತ್ರಿಗಳು ಏನೇನು ಕರ್ಮ ನಿ -
ದಾನದಿಂದಲಿ ಮಾಡೆ ಶ್ರೀನಾರಾಯಣನ
ಧ್ಯಾನ ನಾಮಂಗಳು ತಾ ನುಡಿಯದಿರೆ ಕಾಣರು ನಿರ್ವಾಣ
ಅನಾದಿ ನಿಧನ ವಿಜಯವಿಟ್ಠಲನ್ನ
ನೀನೆ ಎನ್ನದವನು ಜ್ಞಾನಿಯಾದರೇನು ॥ 2 ॥
ತ್ರಿವಿಡಿತಾಳ
ಹಲವು ವೇದಗಳೋದಿ ಹಲವು ಕೇಳಿದರೇನೂ
ಇಳಿಯೊಳು ಯತಿಯಾಗಿ ಚರಿಸಲೇನೂ
ಬಲು ವಿವೇಕ ಮತಿ ಸತತವಾದರು ತನ್ನ
ಒಳಗಿದ್ದ ನರಹರಿಯ ಗೆಳೆಯನೆಂದರಿಯಾದೆ
ಕಲಿ ಮಾನವನು ಧರ್ಮಾವಳಿ ನೆಸಗಿದರೇನೂ
ಫಲವಿಲ್ಲವೊ ಬಲುಕಾಲ ಬಳಲಿದರೂ
ಬೆಳೆದ ಗಿಡದ ತುದಿಗೆ ಫಲ ಪುಟ್ಟಿದಂತೆಯೊ
ಕುಲಜಿ ಮಕ್ಕಳ ಪಡೆದು ನೆಲೆಯಾಗದಂತೆ
ಜಲಜನಾಭನ ಭಕ್ತಿ ಮಿಳಿತವಿಲ್ಲದ ಧರ್ಮ
ಮಳಲೊಳು ಗೋಕ್ಷೀರ ಎರದಂತೆ ಯಾಗುವದೂ
ಚಲುವ ಗದಾಗ್ರಜ ವಿಜಯವಿಟ್ಠಲನ್ನ
ಸಲೆ ನಾಮ ಸ್ಮರಿಸದೆ ಸಂಸಾರ ಹರವಿಲ್ಲ ॥ 3 ॥
ಅಟ್ಟತಾಳ
ಹರಿನಾಮದಲಿಂದ ಪರಗತಿಯಾದಂತೆ
ಧರೆಯೊಳಗುಳ್ಳ ವಿಸ್ತಾರ ಕರ್ಮವ
ಮರಿಯದೆ ವಿರಚಿಸಿ ಇರಳು ಹಗಲು ಇರೆ
ಕಿರಿಯ ದೋಷಂಗಳು ತೆರಳಿದಂತೆ ಪೋಗಿ
ತಿರುಗಿ ಸೇರಿಕೊಂಡು ಭರತವಾಗಿಪ್ಪವೊ
ನರನು ತಿರುಗುತ ಕೆಸರನು ತುಳಿದು ಬಂದು
ಮರಳಿ ಕೆಸರಿನಲ್ಲಿ ಚರಣವ ತೊಳೆದಂತೆ
ಹಿರಿದಾಗಿ ಕರ್ಮವ ಹರುಷದಿಂದಲಿ ಮಾಡೆ
ಪರಿಪೂರ್ಣವಾಗದೆ ದುರಿತ ಸಂಘಟಿಸೋದು
ಸುರಧೀಶ ವಿಕ್ರಮ ವಿಜಯವಿಟ್ಠಲನ್ನ
ಸ್ಮರಣೆ ಸರ್ವಕ್ಕೆ ಪ್ರಾಯಶ್ಚಿತ್ತ ಭೂತಾ ॥ 4 ॥
ಆದಿತಾಳ
ದ್ವೇಷದಲ್ಲಿಯಾಗಲಿ ಪರಿಹಾಸ್ಯದಲ್ಲಿಯಾಗಲೀ
ಭಾಸದಲ್ಲಿ ಆಗಲಿ ಆಭಾಸದಲ್ಲಿ ಆಗಲೀ
ಕ್ಲೇಶದಲ್ಲಿ ಆಗಲೀ ಅಕ್ಲೇಶದಲ್ಲಿ ಆಗಲೀ
ಮೀಸಲಾದ ಅಜ್ಞಾನದಲ್ಲಿ ಆಗಲಿ
ಆಶೆಯನ್ನು ಬಿಟ್ಟು ವಿಶೇಷ ಭಕುತಿಯಿಂದಲಿ
ದಾಸನೆಂದು ಕೈಯ್ಯ ಮುಗಿದು ನೀ ಸಲಹು ಹರಿ ಎನಲು ಏಸೇಸು ಜನ್ಮದ ಅಘ ನಾಶವಾಗುವದು
ಈಶ ನಹುಷ ವಿಜಯವಿಟ್ಠಲ ಅಶೇಷ ದೋಷದೂರ
ವಾಸವಾಗಿ ಹೃದಯದೊಳು ವಾಸನಾಮಯ ನೆನಿಸುವ ॥ 5 ॥
ಜತೆ
ಹರಿನಾಮದಿಂದಲಿ ಸಂಸಾರ ನಿವೃತ್ತಿ
ಸ್ಥಿರವೆಂದವರ ಬಿಡನು ಸುತಪ ವಿಜಯವಿಟ್ಠಲ ॥
***********
ಹರಿನಾಮ ವಿಸ್ಮರಣೆ ಸರ್ವಥಾ ಮಾಡಲಾಗದು
ರಾಗ - ಕಾಂಬೋದಿ ಧ್ರುವತಾಳ
ಹರಿಯೆ ಜಗದ ಧೋರಿಯೆ ನಿರುತ ಭಾಗ್ಯದ ಶಿರಿಯೆ|
ದುರಿತ ಗಜಕೆ ಸರಿಯೆದನುಜಾರಿಯಾ| ಸ್ಮರಣೆಯ ಮಾಡಲರಿಯಾ ಅರಿಯದ ನರಾಗುರಿಯ| ಕರಿಸಿ ಯಮ ಪರಿಪರಿಯಾತಿವ ರೂರಿಯಾ| ನರಕಾದಿಗೆ ಗುರಿಯಾ ನೀರಿಸುವನು ಘನಸಿರಿಯಾ| ವರ ಕಲ್ಪ ಕಲ್ಪಕ್ಕೆ ದೋಷಕಾರಿಯಾ|ದುರಿತಿ ಕ್ರಮ ನಾಮ ವಿಜಯವಿಠ್ಠಲನ್ನ| ಮರಿಯಾದಿರೆ ವಿರಂಚಿದುರ್ಲೆಖಬರಿಯಾ ||೧||
ಮಟ್ಟತಾಳ
ಸ್ನಾನ ಜಪ ತಪವು ಮೌನವನುಷ್ಠಾನ| ದಾನಪರ್ವಣಿ ಪುಣ್ಯಜ್ಞಾನ ಸುಯಾಗಗಳು ನಾನಾಕ ಯಾತ್ರಿಗಳು ಏನೇನು ಕರ್ಮನಿ| ದಾನದಿಂದಲಿ ಕಾಣರು ನಿರ್ವಾಣ ಅನಾದಿನಿಧನ ವಿಜಯವಿಠ್ಠಲನ್ನ| ನೀನೆ ಎನ್ನದವನು ಜ್ಞಾನಿಯಾದರೇನು||೨||
ತ್ರಿವಿಡಿತಾಳ
ಹಲವು ವೇದಗಳೋದಿ ಹಲವು ಕೇಳಿದರೇನೊ| ಇಳಿಯೊಳು ಯತಿಯಾಗಿ ಚರಿಸಲೇನೊ | ಬಲು ವಿವೇಕ ಮತಿ ಸತತವಾದರು ತನ್ನ| ಒಳಗಿದ್ದ ನರಹರಿಯ ಗೆಳಿಯನೆಂದರಿಯಾದೆ| ಕಲಿ ಮಾನವನು ಧರ್ಮಾವಳಿ ನೇಸಗಿದರೇನೊ| ಫಲವಿಲ್ಲವೊ ಬಲುಕಾಲ ಬಳಲಿದರೂ | ಬೆಳೆದ ಗಿಡದ ತುದಿಗೆ ಫಲಪುಟ್ಟಿದಂತೆಯೊ| ಕುಲಜಿ ಮಕ್ಕಳ ಪಡೆದು ನೆಲೆಯಾಗದಂತೆ ಜಲಜನಾಥನ ಭಕ್ತಿ ಮಿಳಿತವಲ್ಲದ ಧರ್ಮ| ಮಳಲೊಳು ಗೋಕ್ಷೀರ ಎರೆದಂತೆಯಾಗುವುದೂ| ಚಲುವ ಗದಾಗ್ರಜ ವಿಜಯವಿಠ್ಠಲನ್ನ| ಸಲೆನಾಮ ಸ್ಮರಿಸದೆ ಸಂಸಾರ ಹರವಿಲ್ಲ||೩||
ಅಟ್ಟತಾಳ
ಹರಿನಾಮದಲಿಂದ ಪರಗತಿಯಾದಂತೆ ಧರೆಯೊಳಗುಳ್ಳ ವಿಸ್ತಾರ ಕರ್ಮವ ಮರಿಯದೆ ವಿರಚಿಸಿ ಇರಳು ಹಗಲುಯಿರೆ | ಕಿರಿಯ ದೋಷಂಗಳು ತೆರಳಿದಂತೆ ಪೋಗಿ | ತಿರುಗಿ ಸೇರಿಕೊಂಡು ಭರತವಾಗಿಪ್ಪೊ| ನರನು ತಿರುಗುತ್ತಾ ಕೇಸರನು ತುಳಿದು ಬಂದು ಮರಳೆ ಕೆಸರಿನಲ್ಲಿ ಚರಣವ ತೊಳೆದಂತೆ| ಹಿರಿದಾಗಿ ಕರ್ಮವ ಹರುಷದಿಂದಲಿ ಮಾಡಿ ಪರಿಪೂರ್ಣವಾಗದೆ ದುರಿತ ಸಂಘಟಿಸೋದು| ಸುರಾಧೀಶ ವಿಕ್ರಮ ವಿಜಯ ವಿಠ್ಠಲನ್ನ| ಸ್ಮರಣೆ ಸರ್ವಕ್ಕೆ ಪ್ರಾಯಶ್ಚಿತ ಭೂತಾ||೪||
ಆದಿತಾಳ
ದ್ವೇಷದಿಂದಾಗಲಿ ಪರಿಹಾಸ್ಯದಿಂದಲಿಯಾಗಲೀ ಭಾಸದಲಿ ಆಗಲಿ ಆಭಾಸದಲ್ಲಿ ಆಗಲೀ| ಕ್ಲೇಶದಲ್ಲಿ ಆಗಲೀ ಅಕ್ಲೇಶದಲ್ಲಿ ಆಗಲೀ| ಮೀಸಲಾದ ಅಜ್ಞಾನದಲ್ಲಿ ಆಗಲಿ ಆಶೆಯನ್ನು ಬಿಟ್ಟು ವಿಶೇಷ ಭಕ್ತಿಯಿಂದಲಿ| ದಾಸನೆಂದು ಕೈಯ ಮುಗಿದು ನೀ ಸಲಹು ಹರಎನಲು| ಏಸೇಸು ಜನ್ಮದ ಅಘ ನಾಶನವಾಗುವದು| ಈಶ ನಹುಷ ವಿಜಯವಿಠ್ಠಲ ಅಶೇಷ ದೋಷ ದೂರ ವಾಸವಾಗಿ ಹೃದಯದೊಳು ವಾಸನಾಮಯ ನೆನಿಸುವ||೫||
ಜತೆ
ಹರಿನಾಮದಿಂದಲಿ ಸಂಸಾರ ನಿವೃರ್ತಿ |
ಸ್ಥಿರವೆಂದವರ ಬಿಡನು ಸುತಪ ವಿಜಯ ವಿಠ್ಠಲ||೬||
ಕರಣಂ ರಾಜಾರಾಂ
*****************