Showing posts with label ತನುವ ನಂಬಲುಬೇಡ ಜೀವವೆ purandara vittala. Show all posts
Showing posts with label ತನುವ ನಂಬಲುಬೇಡ ಜೀವವೆ purandara vittala. Show all posts

Thursday, 5 December 2019

ತನುವ ನಂಬಲುಬೇಡ ಜೀವವೆ purandara vittala

ಪುರಂದರದಾಸರು
ತನುವ ನಂಬಲುಬೇಡ ಜೀವವೆ ಪ.

ಅನುವಾಗಿ ನಿನ್ನಂಗಕೆ ಕೆಲಕಾಲ ತೋರುವದು |ಅನುವಿಲ್ಲದಾಗ ಈ ತನುವೆ ನಿನಗೆ ವೈರಿ ಅಪ

ಜರೆಮರಣಗಳಿಂದ ಭರಿತವಾದುದುಕಾಯ |ಸ್ಥಿರವೆಂದು ನಂಬಿ ನೀ ಮರುಳಾಗಬೇಡ 1

ಧನ - ಧಾನ್ಯ ಪಶು - ಪತ್ನಿ ಸ್ಥಿರವೆಂದು ತಿಳಿದು |ಮನುಮತನಯ್ಯನ ಮರೆಯದೆ ಮನವೆ 2

ಶರಣೆಂದರೆಕಾವ ಗರುಡಕೇತನ ನಮ್ಮ |ಪುರಂದರವಿಠಲನ ಮರೆಯದೆ ಮನವೆ 3
*****