Showing posts with label ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಕರುಣದಿ tande shreepati vittala PAANDURANGA TATPAADA PAALISAYYA KARUNADI. Show all posts
Showing posts with label ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಕರುಣದಿ tande shreepati vittala PAANDURANGA TATPAADA PAALISAYYA KARUNADI. Show all posts

Saturday, 4 December 2021

ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಕರುಣದಿ ankita tande shreepati vittala PAANDURANGA TATPAADA PAALISAYYA KARUNADI



ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಕರುಣದಿ ಪಿಡಿಕೈಯ್ಯ || ಪ ||

ಪುಂಢರೀಕಮುನಿವರದ ನಮಿಪೆ ನಿನಗೇ ನೀ ತ್ವರಿತದಲ್ಲೆನಗೆ || ಅ.ಪ ||

ವನಜಭವಾದಿ ಸಮಸ್ತ ಸುರವ್ರಾತಾ-ವಂದಿತ ಶ್ರೀನಾಥಾ
ಪ್ರಣತಾರ್ಥಾಹರನೆ ಕಾಮಿತಫಲದಾತಾ-ಮುನಿಗಣಸಂಧ್ಯಾ ತಾ
ನೆನೆವ ಜನರ ಮನದೊಳಿಹ ವಿಖ್ಯಾತಾ-ಭುವನಾದಿನಾಥಾ
ಘನಮಹಿಮ ಒಲಿದು ಪಾಲಿಸೆನ್ನ ಮಾತಾ-ದಯಮಾಡಿ ತ್ವರಿತಾ || ೧ ||

ಸುರಚಿರ ಮಹಿಮನೆ ಭಜಕಾಮರಧೇನೂ-ವಸುದೇವರ ಸೂನೂ
ಧರಣಿಯೊಳಗೆ ನಮ್ಮ ಹಿರಿಯರನುದ್ಧಾರಾ-ಮಾಡಿದ ಗಂಭೀರಾ
ದೊರೆಯೇ ನಿನ್ಹೊರತನ್ಯರನಾನರಿಯೇ-ಕೇಳಲೊ ನರಹರಿಯೇ
ಕರೆಕರೆ ಭವದೊಳು ಬಿದ್ದು ಬಾಯ್ಬಿಡುವೇ-ಪೊರೆಯೆಂದು ನುಡಿವೇ || ೨ ||

ಬಂದ ಜನರ ಭವಸಾಗರ ಪರಿಮಿತಿ-ತೋರಿಸುತಿಹ ರೀತೀ
ಚೆಂದದಿಂದ ಕರವಿಟ್ಟು ಕಟಿಗಳಲ್ಲಿ-ಈ ಸುಕ್ಷೇತ್ರದಲೀ
ನಿಂದಿಹ ಭೀಮಾತೀರ ಚಂದ್ರಭಾಗಾದಲ್ಲಿಯ ವೈಭೋಗಾ
ತಂದೆ ಶ್ರೀಪತಿ ವಿಠ್ಠಲ ಸುಖಸಿಂಧೋ-ಅನಾಥ ಬಂಧೋ || ೩ ||
***********

ರಾ ಗ - ಸಂದಡಿ  :  ತಾಳ - ಆದಿತಾಳ

ಪಾಂಡುರಂಗ ತ್ವತ್ಪಾದ ಪಾಲಿಸಯ್ಯ l
ಕರುಣದಿ ಪಿಡಿ ಕೈಯ್ಯಾ l
ಪುಂಡರೀಕ ಮುನಿವರದ ನಮಿಪೆ ನಿನಗೇ l
ನೀ ತ್ವರಿತದಲೆನಗೇ ll ಪ ll

ವನಜಭವಾದಿ ಸಮಸ್ತ ಸುರವ್ರಾತಾ l
ವಂದಿತ ಶ್ರೀನಾಥಾ l
ಪ್ರಣತಾರ್ತಿಹರನೆ ಕಾಮಿತ ಫಲದಾತಾ l
ಮುನಿಗಣ ಸಂಧ್ಯಾತಾ l
ನೆನೆವ ಜನರ ಮನದೊಳಗಿಹ ವಿಖ್ಯಾತಾ l
ಭುವನಾದಿ ನಾಥಾ l
ಘನ ಮಹಿಮಲಿದು ಲಾಲಿಸೆನ್ನ ಮಾತಾ l
ದಯಮಾಡಿ ತ್ವರಿತಾ ll 1 ll

ಸುರಚಿರ ಮಹಿಮನೇ ಭಾಜಕಾಮರಧೇನೂ l
ವಸುದೇವಸೂನೂ l
ಧರಣಿಯೊಳಗೆ ನಮ್ಮ ಹಿರಿಯರ ಉದ್ಧಾರಾ l
ಮಾಡಿದ ಗಂಭೀರಾ l
ಧೊರೆ ನಿಮ್ಹೊರತು ಅನ್ಯರನ ನಾನರಿಯೇ l
ಕೇಳಲೋ ನರಹರಿಯೇ l
ಕರಕರಿ ಭವದೊಳು ಬಿದ್ದು ಬಾಯಿ ಬಿಡುವೇ l
ಪೊರಿ ಎಂದು ನುಡಿವೇ ll 2 ll

ಬಂದ ಜನರ ಭವಸಾಗರ ಪರಿಮಿತೀ l
ತೋರಿಸುತಿಹ ರೀತೀ l
ಛಂದದಿಂದ ಕರವಿಟ್ಟು ಕಟಿಗಳಲ್ಲೀ l 
ಈ ಸುಕ್ಷೇತ್ರದಲೀ l
ನಿಂದಿಹ ಭೀಮಾತೀರಾ ಚಂದ್ರಭಾಗಾ l
ದಲ್ಲಿಹ ವೈಭೋಗಾ l
ತಂದೆಶ್ರೀಪತಿವಿಠಲ ಸುಖಸಿಂಧೋ l
ಅನಾಥ ಬಂಧೋ ll 3 ll
******

ರಾಗ : ಸಂದಡಿ    ತಾಳ : ಆದಿ

ಪಾಂಡುರಂಗ ತ್ವತ್ಪಾದ

ತೋರಿಸಯ್ಯಾ ।

ಕರುಣದಿ ಪಿಡಿಯಯ್ಯಾ ।

ಪುಂಡರೀಕ ಮುನಿ

ವರದ ನಮಿಪೆ ನಿನಗೇ ।

ನೀ ತ್ವರಿತದಿಲೆನಗೇ ।। ಪಲ್ಲವಿ ।।

ವನಜ ಭವಾದಿ

ಸಮಸ್ತ ಸುರವ್ರಾತಾ ।

ವಂದಿತ ಶ್ರೀನಾಥಾ ।

ಪ್ರಣತಾರ್ತಿಹರನೆ

ಕಾಮಿತ ಫಲದಾತಾ ।

ಮುನಿಗಣ ಸಂಧ್ಯಾತಾ ।।

ನೆನೆವ ಜನರ ಮನ-

ದೊಳಗಿಹ್ಯ ವಿಖ್ಯಾತ ।

ಭುವನಾಧಿ ನಾಥಾ ।

ಘನ ಮಹಿಮ ಒಲಿದು

ಲಾಲಿಸೆನ್ನ ಮಾತಾ ।

ದಯಮಾಡಿ ತ್ವರಿತಾ ।। ಚರಣ ।।

ಸುರಚಿರ ಮಹಿಮನೆ

ಭಜ ಕಾಮಧೇನೂ ।

ವಸುದೇವ ಸೂನೂ ।

ಧರಣಿಯೊಳಗೆ ನಮ್ಮ

ಹಿರಿಯರ ಉದ್ಧಾರ ।

ಮಾಡಿದ ಘಂಭೀರಾ ।।

ಧೊರೆ ನಿಮ್ಹೊರತು

ಅನ್ಯರನ ನಾನರಿಯೆ ।

ಕೇಳೆಲೊ ನರಹರಿಯೇ ।

ಕರಕರಿ ಭವದೊಳು

ಬಿದ್ದು ಬಾಯಿ ಬಿಡುವೆ ।

ಪೊರಿಯೆಂದು

ನುಡಿವವೇ ।। ಚರಣ ।।

ಬಂದ ಜನರ

ಭವಸಾಗರ ಪರಿಮಿತೀ ।

ತೋರಿಸುತಿಹ್ಯ ರೀತೀ ।

ಛಂದದಿಂದ

ಕರವಿಟ್ಟು ಕಟಿಗಳಲ್ಲಿ ।

ಈ ಸುಕ್ಷೇತ್ರದಲ್ಲಿ ।।

ನಿಂದಿಹ್ಯ ಭೀಮಾ

ತೀರ ಚಂದ್ರಭಾಗಾ ।

ದಲ್ಲಿಹ್ಯ ವೈಭೋಗಾ ।

ತಂದೆ ಶ್ರೀಪತಿ -

ವಿಠ್ಠಲಸುಖ ಸಿಂಧೋ ।

ಅನಾಥ ಬಂಧೋ ।। ಚರಣ ।।

***