Showing posts with label ಚಂದಲಾ ಪರಮೇಶ್ವರಿ ವಂದಿಸುವೆನು ಚಂದಲಾ ಪರಮೇಶ್ವರಿ gadugina veeranarayana. Show all posts
Showing posts with label ಚಂದಲಾ ಪರಮೇಶ್ವರಿ ವಂದಿಸುವೆನು ಚಂದಲಾ ಪರಮೇಶ್ವರಿ gadugina veeranarayana. Show all posts

Wednesday, 1 September 2021

ಚಂದಲಾ ಪರಮೇಶ್ವರಿ ವಂದಿಸುವೆನು ಚಂದಲಾ ಪರಮೇಶ್ವರಿ ankita gadugina veeranarayana

..

kruti by ವೀರನಾರಾಯಣ Veeranarayana 


ಚಂದಲಾ ಪರಮೇಶ್ವರಿ ವಂದಿಸುವೆನು ಚಂದಲಾ ಪರಮೇಶ್ವರಿ ಪ


ಚೆಂದಾಗಿ ಮನಸಿಗಾನಂದ ನೀಡುವ ನಿನ್ನಮುಂದೆಯೆ ಕಂದ ತಾ ಬಂದು ನಿಂದಿಹೆನವ್ವ ಅ.ಪ.


ಘನದಯಾವಂತೆ ಕಾಯೆ ಇದು ನಿನ್ನಅನುಗ್ರಹವೆಂಬೆ ತಾಯೆಕನಸಿನೊಳಿರಲಿಲ್ಲ ಮನಸಿನೊಳಿರಲಿಲ್ಲಜನನಿ ನೀನೆ ಕರೆಸಿ ದರುಶನವಿತ್ತವ್ವ 1


ಸನಿತೆಯೊಳ್ಬಂದು ನಿಂತು ದಯಾಮೃತವಹನಿಸುವಿ ಜನರಿಂಗಿತುಜನರ ಪಾವನ ಮಾಡಿ ಘನ ಸಂತಸ ನೀಡಿಅನುದಿನ ಜನ ಪಾಡಿ ಕುಣಿಯುವಂತೆ ಕೃಪೆ ಮಾಡೆ 2


ಸದಯಾಮೂರ್ತಿಯು ನೀ ಸತ್ಯ ನಿನ್ನಯ ಪಾದಪದುಮಕೆ ಮಣಿಯುವೆ ನಿತ್ಯಗದುಗಿನ ವೀರನಾರಾಯಣನೆನ್ನಯಹೃದಯದಿ ಸತತ ನಿಲುವಂತೆ ಕರುಣಿಸೌ 3

***