ಪುರಂದರದಾಸರು
ರಾಗ ಕಲ್ಯಾಣಿ ಅಟ ತಾಳ
ಸಂದಿತಯ್ಯ ಪ್ರಾಯವು ಸಂದಿತಯ್ಯ ||ಪ ||
ಒಂದು ದಿನವು ಸುಖವು ಇಲ್ಲ
ಕುಂದಿ ಹೋದೆ ಕಷ್ಟದಿಂದ
ಬಂಧನವನು ಬಿಡಿಸುತೆನ್ನ
ತಂದೆ ನೀನೆ ರಕ್ಷಿಸಯ್ಯ ||ಅ ||
ತಂದೆ ಉದರದಿ ಮೂರು ತಿಂಗಳು
ಸಂದು ಹೋಯಿತು ತಿಳಿಯದೆ
ಬೆಂದೆ ನವಮಾಸದೊಳು ಗರ್ಭದಿ
ನಿಂದು ತಾಯಿಯ ಗರ್ಭದೆ |
ಕುಂದಿತಾಯುವು ಒಂದು ವರುಷ
ಇಂದಿರೇಶನೆ ಕೇಳು ದುಃಖವ
ಬಂಧನದೊಳಗೆ ನಿಂದೆನನುದಿನ
ಮುಂದೆ ಮೋಕ್ಷದ ಮಾರ್ಗ ಕಾಣದೆ ||
ಕತ್ತಲೆಯೊಳಿರಲಾರೆನುತಲಿ
ಹೊತ್ತೆ ಹರಕೆಯ ನಿನ್ನೊಳು
ನಿತ್ಯದಲಿ ಮಲಮೂತ್ರ ಬಾಲ್ಯದಿ
ಹೊತ್ತುಗಳೆದೆನು ಎನ್ನೊಳು |
ಮತ್ತೆ ಹದಿನಾರರ ಪ್ರಾಯದಿ
ಉಕ್ಕಿ ನಡೆದೆನು ಧರೆಯೊಳು
ಹತ್ತಿ ಸಂಸಾರದ ಮಾಯಾ
ಸಿಕ್ಕಿದೆನು ಭವಬಲೆಯೊಳು ||
ಎಡೆಬಿಡದೆ ಅನುದಿನದಿ ಪಾಪದ
ಕಡಲೊಳಗೆ ನಾ ಬಿದ್ದೆನೊ
ದಡವ ಕಾಣದೆ ದುಃಖದೊಳು ಬೆಂ-
ದೊಡಲೊಳಗೆ ನಾ ನೊಂದೆನೋ |
ಬಿಡದೆ ನಿನ್ನಯ ಧ್ಯಾನವೆಂದೆಂ-
ಬ್ಹಡಗವೇರಿಸು ಎಂದೆನೋ
ದೃಢದಿ ನಿನ್ನಯ ಪಾದ ಸೇರಿಸೊ
ಒಡೆಯ ಪುರಂದರವಿಟ್ಠಲ ||
***
ರಾಗ ಕಲ್ಯಾಣಿ ಅಟ ತಾಳ
ಸಂದಿತಯ್ಯ ಪ್ರಾಯವು ಸಂದಿತಯ್ಯ ||ಪ ||
ಒಂದು ದಿನವು ಸುಖವು ಇಲ್ಲ
ಕುಂದಿ ಹೋದೆ ಕಷ್ಟದಿಂದ
ಬಂಧನವನು ಬಿಡಿಸುತೆನ್ನ
ತಂದೆ ನೀನೆ ರಕ್ಷಿಸಯ್ಯ ||ಅ ||
ತಂದೆ ಉದರದಿ ಮೂರು ತಿಂಗಳು
ಸಂದು ಹೋಯಿತು ತಿಳಿಯದೆ
ಬೆಂದೆ ನವಮಾಸದೊಳು ಗರ್ಭದಿ
ನಿಂದು ತಾಯಿಯ ಗರ್ಭದೆ |
ಕುಂದಿತಾಯುವು ಒಂದು ವರುಷ
ಇಂದಿರೇಶನೆ ಕೇಳು ದುಃಖವ
ಬಂಧನದೊಳಗೆ ನಿಂದೆನನುದಿನ
ಮುಂದೆ ಮೋಕ್ಷದ ಮಾರ್ಗ ಕಾಣದೆ ||
ಕತ್ತಲೆಯೊಳಿರಲಾರೆನುತಲಿ
ಹೊತ್ತೆ ಹರಕೆಯ ನಿನ್ನೊಳು
ನಿತ್ಯದಲಿ ಮಲಮೂತ್ರ ಬಾಲ್ಯದಿ
ಹೊತ್ತುಗಳೆದೆನು ಎನ್ನೊಳು |
ಮತ್ತೆ ಹದಿನಾರರ ಪ್ರಾಯದಿ
ಉಕ್ಕಿ ನಡೆದೆನು ಧರೆಯೊಳು
ಹತ್ತಿ ಸಂಸಾರದ ಮಾಯಾ
ಸಿಕ್ಕಿದೆನು ಭವಬಲೆಯೊಳು ||
ಎಡೆಬಿಡದೆ ಅನುದಿನದಿ ಪಾಪದ
ಕಡಲೊಳಗೆ ನಾ ಬಿದ್ದೆನೊ
ದಡವ ಕಾಣದೆ ದುಃಖದೊಳು ಬೆಂ-
ದೊಡಲೊಳಗೆ ನಾ ನೊಂದೆನೋ |
ಬಿಡದೆ ನಿನ್ನಯ ಧ್ಯಾನವೆಂದೆಂ-
ಬ್ಹಡಗವೇರಿಸು ಎಂದೆನೋ
ದೃಢದಿ ನಿನ್ನಯ ಪಾದ ಸೇರಿಸೊ
ಒಡೆಯ ಪುರಂದರವಿಟ್ಠಲ ||
***
pallavi
sanditayya prAyavu sanditayya
anupallavi
ondu dinavu sukhavu illa kundi hOde kaSTadina bandhavanu biDisudenna tande nIne rakSisayya
caraNam 1
tandeyudharadi mUru tingaLu sandu hOyitu tiLiyade
bende navamAsadoLu garbhadi nindu tAyiya garbhade
kundi tAyivu ondu varuSa indirEshane kELu dukkhava
bandhanadoLage nindenanudina munde mOkSada mArga kANade
caraNam 2
kattaleyoLiralArenutali hotte harakeya ninnoLu
nityadali malamUtra bAlyadi hottugaLadenu ennoLu
matte hadinArara prAyadi ukki neDedenu dhareyoLu
hatti samsArada mAyA sikkidenu bhavabaleyoLu
caraNam 3
eDabiDade anudinadi pApada kaDaloLage nA biddenoO
daDava kANade dukkhadoLu bendoDaloLage nA nondenO
biDade ninnaya dhyAnavendemba haDagavErisu endenO
drDhadi ninnaya pAda sEriso oDeya purandara viTTala
***
ಸಂದಿತಯ್ಯ ಪ್ರಾಯವು |ಸಂದಿತಯ್ಯ ಪ್ರಾಯವು ಪ
ಮೂರು ತಿಂಗಳುಸಂದುಹೋಯಿತು ತಿಳಿಯದೆ ||ಬಂದೆ ತಾಯಿಯ ಜಠರದಲಿ ಮ-|ತ್ತೊಂದು ಬುದ್ಧಿಯನರಿಯದೆ ||ಬೆಂದೆ ನವಮಾಸದಲಿ ಗರ್ಭದಿ |ಒಂದು ದಿವಸವು ತಡೆಯದೆ ||ಕುಂದದೀಪರಿಯೊಂದು ವರುಷವು |ಇಂದಿರೇಶನೆ ಕೇಳು ದುಃಖವ 1
ಕತ್ತಲೆಯೊಳಿರಲಾರೆನೆನುತಲಿ |ಹೊತ್ತೆ ಹರಕೆಯ ನಿನ್ನನು ||ಮತ್ತೆ ಜನಿಸಲು ಭೂಮಿಯೊಳು ನಾ |ಅತ್ತುನಿನ್ನನು ಮರೆತೆನು ||ಮತ್ತೆ ಮಲ-ಮೂತ್ರದೊಳು ಬಾಲ್ಯದಿ |ಹೊತ್ತು ದಿನಗಳ ಕಳೆದೆನು ||ಮತ್ತೆ ನರಕದೊಳುರುಳುತುರುಳುತ |ಉತ್ತಮೋತ್ತಮ ನಿನ್ನ ನೆನೆಯದೆ 2
ಚಿಕ್ಕತನವನು ಮಕ್ಕಳಾಟದಿ |ಅಕ್ಕರಿಂದಲಿ ಕಳೆದೆನು ||ಸೊಕ್ಕಿ ಹದಿನಾರಲಿ ನಾನತಿ |ಮಿಕ್ಕಿ ನಡೆದೆನು ನಿನ್ನನು ||ಸಿಕ್ಕಿ ಬಹು ಸಂಸಾರ ಮಾಯೆಯ |ಕಕ್ಕುಲಿತೆಯೊಳು ಬಿದ್ದೆನು ||ಹೊಕ್ಕುದಿಲ್ಲವು ನಿನ್ನ ಪಾದವ |ರಕ್ಕಸಾರಿಯೆ ಕೇಳು ದುಃಖವ 3
ಸುಳಿದೆ ಮನೆಮನೆ ಕಳೆದೆ ಕಾಲವ |ಉಳಿದ ಯೋಚನೆ ಮಾಡದೆ ||ಬೆಳೆದೆ ತಾಳೆಯ ಮರದ ತೆರದಲಿ ||ಉಳಿವ ಬಗೆಯನು ನೋಡದೆ ||ಎಳೆಯ ಮನದೊಳೆ ಇಳೆಯ ಜನರೊಳು |ಬಳಕೆ ಮಾತುಗಳಾಡಿದೆ ||ಕಳೆದೆ ಈ ಪರಿಯಿಂದ ಕಾಲವ |ನಳಿನನಾಭನೆ ನಿನ್ನ ನೆನೆಯದೆ 4
ಎಡೆಬಿಡದೆಅನುದಿನದಿ ಪಾಪದ |ಕಡಲೊಳಗೆ ನಾನಾಳ್ದೆನು ||ದರವ ಕಾಣೆದೆ ಮಧ್ಯದಲಿ ಎ-|ನ್ನೊಡಲೊಳಗೆ ನಾನೊಂದನು ||ದೃಢದಿ ನಿನ್ನಯ ಧ್ಯಾನವೆಂಬಾ |ಹಡಗವೇರಿಸು ಎನ್ನನು ||ಒಡೆಯ ಪುರಂದರವಿಠಲ ಎನ್ನನು |ಬಿಡದೆ ಕಾಯೈ ಬೇಗ ಶ್ರೀಹರಿ5
*********