Showing posts with label ಮಾಡಿದ ಎನ್ನ ಫಕೀರನು ಸದ್ಗುರು ಮಾಡಿದ ಎನ್ನ ಫಕೀರ purandara vittala. Show all posts
Showing posts with label ಮಾಡಿದ ಎನ್ನ ಫಕೀರನು ಸದ್ಗುರು ಮಾಡಿದ ಎನ್ನ ಫಕೀರ purandara vittala. Show all posts

Thursday, 5 December 2019

ಮಾಡಿದ ಎನ್ನ ಫಕೀರನು ಸದ್ಗುರು ಮಾಡಿದ ಎನ್ನ ಫಕೀರ purandara vittala

ರಾಗ ಧನಶ್ರೀ ಅಟತಾಳ 

ಮಾಡಿದ ಎನ್ನ ಫಕೀರನು ಸದ್ಗುರು
ಮಾಡಿದ ಎನ್ನ ಫಕೀರ ||ಪ ||

ಅನುಭವ ಖಪ್ಪರಿ ಹೃದಯದ ಜೋಳಿಗೆ ಎನ್ನಯ ಕಂಕುಳಲಿಟ್ಟು
ಅನಿಮಿಷಧಟ್ಟಿ ಅರಗಿನ ರೊಟ್ಟಿ ಎನ್ನಯ ಕೈಯಲಿಟ್ಟ ||

ನಾದದ ತಂಬುರಿ ಮೋದಮಂದಾರವು ನಿಚ್ಚಂಗದ ಟೊಪ್ಪಿಗೆನಿಟ್ಟ
ಬೋಧದ ಭಂಗಿ ಅಮೃತದ ಲುಂಗಿ ಸಮಾನ ಗುಳಿಗೆಯನಿಟ್ಟ ||

ಈ ಪರಿ ಮಾಡಿ ಬಯಲನ ತೋರಿ ಕರವನು ನೆತ್ತಿಯಲಿಟ್ಟ
ಭೂಪ ಪುರಂದರವಿಟ್ಠಲರಾಯನು ತಿರುಗೆಂದಪ್ಪಣೆ ಕೊಟ್ಟ ||
***

pallavi

mADida enna phakIranu sadguru mADida enna bhakIra

caraNam 1

anubhava gappari hrdayada jOLige ennaya kanguLaliTTa
AmiSa dhaTTi aragina roTTi ennaya kaiyaliTTa

caraNam 2

nAdada tamburi mAdamandAravu niccangada ToppigeniTTa
bOdhada bhangi amrtada lungi samAna guLigeyaniTTa

caraNam 3

I pari mADi bayalana tOri karavanu nettiyaliTTa
bhUpa purandara viTTalarAyanu tirugendappaNe koTTa
***