..
kruti by ಭೀಮಾಶಂಕರರು ದಾಸರು bheemashankara
ಶಾಂಭವಿ ದಯಮಾಡೆ ಸಿಟ್ಟು ಬಿಡು | ಮುನಿಯದೆ ಎನ್ನ ಕೂಡ |ಕೋಪವು ಮಾಡಬೇಡ ಎನಗಾರ |ಕರುಣ ದೃಷ್ಟಿಲಿ ನೋಡ ಪ
ವಿಷಯದ ಬಲೆಯೊಳಗೆ ನಾ ಸಿಲುಕಿ | ಮರೆತೆನು ಸರ್ವಾಶಂಕೀ | ಪ್ರಾಯ ಪ್ರಾಯದ ಮದದಿಂದ ಬಹುಸೊಕ್ಕಿ ಬಿಟ್ಟೆನು ನಿನಗಿಂದು ಮೂರ್ತಿ 1
ರಜ ತಮ ಸಂಗದಲಿ ನಾ ಕೆಟ್ಟೆ | ನಿನ್ನ ಸ್ಮರಣೆಯ ಬಿಟ್ಟೆ | ಕಾಮ ಕ್ರೋಧದಲಿ ಬಹು ಸುಟ್ಟೆ |ತಿಳಿಯದು ನಿನ್ನ ಗುಟ್ಟೇ 2
ಮನಸಿಗೆ ತರದಿರೆ ಎನ್ನ ದೋಷ |ಮಾಡೆನ್ನ ದುರಿತವಿನಾಶಾ |ಕಲಿಕಾಲಸುತನಾ ಭವಪಾಶಾ | ಭಜಿಸುವೆ ನಿನ್ನ ಮಹೇಶಾ 3
***