Showing posts with label ಪರಮ ಗುರುವೆ ನಿನ್ನ ಪರಿಪರಿ ಮುನ್ನ ಅರಿತಷ್ಟು ವರ್ಣಿಸುವೆ gopalakrishna vittala. Show all posts
Showing posts with label ಪರಮ ಗುರುವೆ ನಿನ್ನ ಪರಿಪರಿ ಮುನ್ನ ಅರಿತಷ್ಟು ವರ್ಣಿಸುವೆ gopalakrishna vittala. Show all posts

Monday 2 August 2021

ಪರಮ ಗುರುವೆ ನಿನ್ನ ಪರಿಪರಿ ಮುನ್ನ ಅರಿತಷ್ಟು ವರ್ಣಿಸುವೆ ankita gopalakrishna vittala

ಪರಮ ಗುರುವೆ ನಿನ್ನ ಪರಿಪರಿ ಮುನ್ನ

ಅರಿತಷ್ಟು ವರ್ಣಿಸುವೆ ಕೊಡು ದೃಢ e್ಞÁನ ಪ.


ಪರಮ ವೈರಾಗ್ಯಶಾಲಿ ಪರಿಪರಿ ಲೀಲೆ

ತೋರಿದ್ಯೋ ಜಗದಲಿ ಕಾರುಣ್ಯಶಾಲಿ 1

ಗುರುಗಳ ಕರುಣದಿ ಒಲಿದ್ಯೊ ಸ್ವಪ್ನದಿ

ಪರಮಾತ್ಮನಾ ಹಾದಿ ತೋರೆನಗೆ ಮೋದಿ 2

ಕರ್ಮಜ ನೀನೆಂದು ನುಡಿವರೊ ಇಂದು

ಮರ್ಮ ಮನದಿ ನಿಂದು ತೋರೋ ದಯಾಸಿಂಧು 3

ಅಗ್ರಜ ಬಳ್ಳಾಪುರದಿ ಉಗ್ರತಾಪದಿ

ವಿಗ್ರಹ ರಚಿಸಿದೆ ಶ್ರೀಘ್ರದೊಳ್ ದಯದಿ 4

ಪ್ರೀತಿಯಿಂ ಯತಿಶೀಲಾ ನೀತಿಯ ಪಾಲನ

ನೀ ತೋರೋ ಗೋಪಾಲಕೃಷ್ಣವಿಠಲನ 5

****