Monday 2 August 2021

ಪರಮ ಗುರುವೆ ನಿನ್ನ ಪರಿಪರಿ ಮುನ್ನ ಅರಿತಷ್ಟು ವರ್ಣಿಸುವೆ ankita gopalakrishna vittala

ಪರಮ ಗುರುವೆ ನಿನ್ನ ಪರಿಪರಿ ಮುನ್ನ

ಅರಿತಷ್ಟು ವರ್ಣಿಸುವೆ ಕೊಡು ದೃಢ e್ಞÁನ ಪ.


ಪರಮ ವೈರಾಗ್ಯಶಾಲಿ ಪರಿಪರಿ ಲೀಲೆ

ತೋರಿದ್ಯೋ ಜಗದಲಿ ಕಾರುಣ್ಯಶಾಲಿ 1

ಗುರುಗಳ ಕರುಣದಿ ಒಲಿದ್ಯೊ ಸ್ವಪ್ನದಿ

ಪರಮಾತ್ಮನಾ ಹಾದಿ ತೋರೆನಗೆ ಮೋದಿ 2

ಕರ್ಮಜ ನೀನೆಂದು ನುಡಿವರೊ ಇಂದು

ಮರ್ಮ ಮನದಿ ನಿಂದು ತೋರೋ ದಯಾಸಿಂಧು 3

ಅಗ್ರಜ ಬಳ್ಳಾಪುರದಿ ಉಗ್ರತಾಪದಿ

ವಿಗ್ರಹ ರಚಿಸಿದೆ ಶ್ರೀಘ್ರದೊಳ್ ದಯದಿ 4

ಪ್ರೀತಿಯಿಂ ಯತಿಶೀಲಾ ನೀತಿಯ ಪಾಲನ

ನೀ ತೋರೋ ಗೋಪಾಲಕೃಷ್ಣವಿಠಲನ 5

****


No comments:

Post a Comment