Audio by Vidwan Sumukh Moudgalya
.
ಶ್ರೀ ಪುರಂದರದಾಸಾರ್ಯ ವಿರಚಿತ ಶ್ರೀಹರಿ ಪರಿಪೂರ್ಣ ಸುಳಾದಿ - ೧
ರಾಗ : ತೋಡಿ
ಧೃವತಾಳ
ಪದನಖ ಪರಿಪೂರ್ಣ ಜಾನು ಜಂಘೆ ಪರಿಪೂರ್ಣ
ಉರುಕಟಿ ಪರಿಪೂರ್ಣ ಜಘನಾ ಪರಿಪೂರ್ಣ
ಉದರ ತ್ರಿವಳಿ ವಕ್ಷಬಾಹು ಪರಿಪೂರ್ಣ
ಪದುಮಗದೆ ಚಕ್ರಶಂಖ ಪರಿಪೂರ್ಣ
ವದನ ಪರಿಪೂರ್ಣ ಕಂಬುಕಂಠ ಪರಿಪೂರ್ಣ
ಸರ್ವಾಂಗ ಪರಿಪೂರ್ಣ ಪುರಂದರವಿಠ್ಠಲ
ಸರ್ವಾಂಗ ಪರಿಪೂರ್ಣ॥೧॥
ಮಟ್ಟತಾಳ
ಹಮ್ಮು ಪರಿಪೂರ್ಣ ಮನ್ಯೆಪರಿಪೂರ್ಣಾ
ತುಮ್ಮಾ ಪರಿಪೂರ್ಣ ಬುದ್ಧಿ ಪರಿಪೂರ್ಣ
ಚಿತ್ಸುಖಪರಿಪೂರ್ಣ ಪುರಂದರವಿಠ್ಠಲ
ಹಮ್ಮುಪರಿಪೂರ್ಣ ॥೨॥
ಝಂಪೆತಾಳ
ಅನಂತ ಬಾಹುವಾಗಿ ಅನಂತ ಚಕ್ಷುವಾಗಿ
ಅನಂತ ಕಲ್ಪದಲ್ಲಿ ಅನಂತನಾಮ ಶ್ರೀ ಪುರಂದರವಿಠ್ಠಲನ
ಅನಂತ ಅವತಾರಗಳು ಪರಿಪೂರ್ಣ॥೩॥
ಅಟ್ಟತಾಳ
ಶ್ರೋತುರ ನೇತುರ ಘ್ರಾಣತ್ವಗ್ರಸನವ
ಪಾಣಿ ಪಾದ ಪಾಯೋಪಸ್ಥಾದಿ ಈರೈದು
ಮಾತರಿಶ್ವಪ್ರೀಯ ಪುರಂದರವಿಠ್ಠಲನ
ಜ್ಞಾನ ಕರ್ಮೇಂದ್ರಿಯಗಳು ಪರಿಪೂರ್ಣ॥೪॥
ಏಕತಾಳ
ಆವಾವ ದೇಶದಲ್ಲಿ ಆವಾವ ಕಾಲದಲ್ಲಿ
ಆವಾವ ಜೀವರಲ್ಲಿ ಶ್ರೀ ವಲ್ಲಭ
ಪುರಂದರವಿಠ್ಠಲ ಪರಿಪೂರ್ಣ
ಆವಾವ ದೇಶದಲ್ಲಿ॥೫॥
ಜತೆ
ಅರಸೇ ಇಂದಿರೇ ಪರಿಪೂರ್ಣ ಪುರಂದರವಿಠ್ಠಲ
ಸರಸಿಜೋದ್ಭವ ಶರ್ವಾದಿಗಳೆಲ್ಲ ಅಪೂರ್ಣರು॥೬॥
***