Showing posts with label ಗಿರಿಯ ಶಿಖರವ ಕಂಡೆ vijaya vittala ankita suladi ವೆಂಕಟಗಿರಿ ಸುಳಾದಿ GIRIYA SHIKHARAVA KANDE VENKATAGIRI SULADI. Show all posts
Showing posts with label ಗಿರಿಯ ಶಿಖರವ ಕಂಡೆ vijaya vittala ankita suladi ವೆಂಕಟಗಿರಿ ಸುಳಾದಿ GIRIYA SHIKHARAVA KANDE VENKATAGIRI SULADI. Show all posts

Sunday 8 December 2019

ಗಿರಿಯ ಶಿಖರವ ಕಂಡೆ vijaya vittala ankita suladi ವೆಂಕಟಗಿರಿ ಸುಳಾದಿ GIRIYA SHIKHARAVA KANDE VENKATAGIRI SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಶ್ರೀ ವೆಂಕಟಗಿರಿ ಸುಳಾದಿ 

 ರಾಗ ಸಾವೇರಿ 

 ಧ್ರುವತಾಳ 

ಗಿರಿಯ ಶಿಖರವ ಕಂಡೆ ಅರುಣ ಸುವರ್ನಮಯ 
ಮಿರುಗುತಿದೆ ಚತುರ್ದಶ ಧರೆಯೊಳಗೆ ಮೆರುವುತಿದೆ 
ಎರಗುತಿದೆ ಮನವಿರದೆ ಕರಗುತಲಿದೆ ದುರಿತಪಾಶ 
ಪರಿಯುತಿದೆ ಪೀಯೂಷ ಸುರಿವುತಿದೆ ಅನುಗಾಲ 
ವರಕಲ್ಪಕಲ್ಪಕ್ಕೆ ಅರಸಿ ನೋಡಿದರು ಈ 
ಗಿರಿಗೆ ಸಮಾನೆಂದುರು ಕಾಣೆ ನಾನಾವಲ್ಲಿ 
ಪರಿ ಪರಿಯ ತೆರದಿ ಶೃಂಗಾರಲಂಕಾರ ಸುಂ - 
ದರ ಲಕ್ಷಣಗಳಿಂದ ಸರಸದಲಿ ಒಪ್ಪುತಿದೆ 
ವರಗಿರಿಯ ತಿಮ್ಮ ತಿರುಮಲ ತಿರುವೆಂಗಳ 
ಉರಗಗಿರಿಯವಾಸ ವಿಜಯವಿಠ್ಠಲರೇಯ 
ನಿರುತ ಉತ್ಸಾಹದಲ್ಲಿ ಸುರರೊಡೆಯನಿಪ್ಪ ॥ 1 ॥

 ಮಟ್ಟತಾಳ 

ಧರೆಗಿದು ವೈಕುಂಠಪುರವಿದು ನಿಜವೆಂದು 
ಸುರರು ಕಿನ್ನರರು ಸಿದ್ದರು ಗರುಡರು ಸಾ - 
ಧ್ಯರು ಗಂಧರ್ವರು ಉರಗ ಯಕ್ಷರು ಕಿಂ - 
ಪುರುಷರು ಚಾರಣರು ವರಮುನಿಗಳು ಭೂ - 
ಸುರರು ಮೊದಲಾದ ಪರಿಪರಿ ಜ್ಞಾನಿಗಳು 
ಚರಿಸುವರು ವಿಸ್ತಾರ ವೈರಾಗ್ಯದಲಿ 
ಪರಮಪುರುಷ ತಿಮ್ಮಾ ವಿಜಯವಿಠ್ಠಲನ 
ಸ್ಮರಿಸಿ ಗಿರಿಯಲ್ಲಿ ಪರಗತಿ ಬಯಸುತ್ತ ॥ 2 ॥

 ತ್ರಿವಿಡಿತಾಳ 

ಫಲ ಮರ ಗಿಡ ಬಳ್ಳಿ ಖಗಮೃಗ ನಾನಾಕ 
ಕುಲದ ಜೀವಿಗಳೆಲ್ಲ ಚರಿಸುವರಮರಾದಿ 
ಕುಲದ ಕುಲದವರೆಲ್ಲ ಜನಿಸಿ ಒಂದು ರೂಪಿಲಿ 
ಬಲು ಭಕುತಿಯಲ್ಲಿ ಸಾಧನ ಮಾಡುತ್ತ 
ಸುಲಭರಾಗಿಪ್ಪರು ಆವಾಗ ಸುಜನಕೆ 
ಪೊಳೆದು ಕಂಗಳಿಗೆ ಗೋಚರವಾಗುತ್ತ 
ಮಲರಿಗೆ ಎಂದಿಗೆ ಕಾಣಿಸರೂ ಇದರ 
ನೆಲಿಯಾ ಬಲ್ಲರು ಹರಿದಾಸರಯ್ಯಾ 
ಬಲವಂತ ವೆಂಕಟ ವಿಜಯವಿಠ್ಠಲರೇಯಾ 
ಸಲಹೂವ ಈ ಗಿರಿಯ ಸಾರಿದ ಜನರಿಗೆ ॥ 3 ॥

 ಅಟ್ಟತಾಳ 

ಉರಗ ಗಿರಿಯ ಯಾತ್ರಿ ದುರುಳ ಮಾನವರಿಗೆ 
ದೊರಕಾದು ದೊರಕಾದು ದೊರೆತಾರೆ ಫಲಿಸಾದು 
ಹರಿಗುರು ಭಕುತಿಲಿ ಪರನಾಗಿ ನಡೆದಾ ಜ - 
ನರಿಗಲ್ಲದೆ ಮತ್ತರಿಗೆ ಅತಿ ಸುಲಭವೆ 
ಧರಧರ ವರ್ನಾ ಶ್ರೀವಿಜಯವಿಠ್ಠಲ ತಿಮ್ಮ 
ಕರುಣ ಮಾಡಲು ಆಶ್ಚರ್ಯಾಗದು ಕಾಣೊ ॥ 4 ॥

 ಆದಿತಾಳ 

ಮಾರುತನಿಂದಲಿ ಸೋತು ವಾರುಣೀಶ 
ಮೇರುವೆ ಕುಮಾರನೊಳು ತರಂಗಾ 
ಹಾರಲಾರದೆ ಇಲ್ಲಿ ಬಂದು ಮೂರು ಹತ್ತು ಯೋಜನ 
ಪಾರಿಮಿತವಾಗಿ ಆದ್ರಿ ಧಾರುಣಿಯೊಳಗೆ ಸುಧಾ - 
ಕರನಂತೆ ಪೊಳವುತಿದೆ ಆರು ಸಾರಿ ಗೇಲಿ ನಮ - 
ಸ್ಕಾರ ಪ್ರದಕ್ಷಿಣೆ ಸುತ್ತ ವಾರಣದಿಂದ ಮಾಡಲು - 
ದ್ಧಾರನಾಗುವ ಕುಲಸಹಿತಾ 
ಶ್ರೀರಮಣ ವೆಂಕಟ ವಿಜಯವಿಠ್ಠಲ ತಿಮ್ಮ 
ದೂರಮಾಡಿ ಪಾಪನಿಕರ ಬಾರದಂತೆ ಪಾಲಿಸುವ ॥ 5 ॥

 ಜತೆ 

ಅನಂತ ಜನ್ಮದ ಪುಣ್ಯ ಫಲಿಸಿದರೆ 
ಅನಂತ ಗಿರಿಯಾತ್ರಿ ನೀವ ವಿಜಯವಿಠ್ಠಲ ॥
************