..
kruti by Nidaguruki Jeevubai
ಸಂಪ್ರದಾಯದ ಹಾಡು
ಅನಿರುದ್ಧ ಪ್ರದ್ಯುಮ್ನ ಸಂಕರ್ಷಣ ಜೋ
ವಾಸುದೇವ ನಾರಾಯಣ ಜೋ ಜೋ ಪ
ಕೃತಿಶಾಂತಿ ಜಯ ಮಾಯ ಶ್ರೀಲಕ್ಷ್ಮಿಪತಿ ಜೋ
ಪತಿತ ಪಾವನ ಪುರುಷೋತ್ತಮ ಜೋ ಜೋ ಅ.ಪ
ಕುಂದಣ ಮಯವಾದ ಚಂದ ತೊಟ್ಟಿಲಲಿ
ಚಂದ್ರ ಸೂರ್ಯರ ಗೆಲುವ ಮುಖಕಾಂತೆಯಲಿ
ಇಂದಿರಾಪತಿ ಶ್ರೀಶ ಇಭರಾಜವರದ
ಮೂಕಾಂಬಿಕೆ ಮಲಗೆ ತೂಗುವೆ ಹರುಷದಲಿ 1
ಸುರರೆಲ್ಲ ನೆರೆದು ಸಂಭ್ರಮಗೊಳುತಿರಲು
ಸುರಗಂಧರ್ವಪ್ಸರ ಸ್ತ್ರೀಯರು ನಾಚುತಿರಲು
ಹರಬ್ರಹ್ಮ ಮೊದಲಾದವರು ಸ್ತುತಿಸುತಲಿರಲು
ಭಳಿರೆ ಜಗನ್ಮಾತೆ ರಕ್ಷಿಸು ರಕ್ಷಿಸೆನಲು 2
ಘಲು ಘಲು ಘಲುರೆಂಬ ಕಾಲ್ಗೆಜ್ಜೆಗಳಿಂದ
ಥಳ ಥಳ ಹೊಳೆವ ಪೀತಾಂಬರದ ಚಂದ
ಗಿಳಿಗೆಜ್ಜೆ ಹೆರಳು ಬಂಗಾರಗಳಿಂದ
ಹೊಳೆವ ಮೀನ ಬಾವುಲಿ ಸರಗಳ ಚಂದ 3
ಕನ್ನಡಿ ಕದುಪಿನ ನಗೆಮುಖ ಕಾಂತಿ
ಸಣ್ಣ ಮೂಗುತಿನಿಟ್ಟು ನಲಿಯುತ ಶಾಂತಿ-
ಯನು ತೋರುತ ಭಕ್ತಜನರಿಗೆ ಭ್ರಾಂತಿ
ಯನು ಕಳೆದು ಉದ್ಧರಿಸುವ ಕಾಂತೆ4
ಕಮಲ ಮುಖಿಯ ಕರಕಮಲದಿ ಅಭಯ
ತೋರುತ್ತ ಭಕ್ತರಿಗೆಲ್ಲ ಉಣಿಸಿ ಅಮೃತವ
ಕಡೆಗಣ್ಣನೋಟದಿ ಜಗವ ಮೋಹಿಸುವ
ಕಮಲನಾಭವಿಠ್ಠಲ ಭಕುತರ ಪೊರೆವ 5
***