Showing posts with label ರಾಮ ಜಾನಕೀರಮಣ ರಾಜೀವದಳನಯನ vijaya vittala. Show all posts
Showing posts with label ರಾಮ ಜಾನಕೀರಮಣ ರಾಜೀವದಳನಯನ vijaya vittala. Show all posts

Wednesday, 16 October 2019

ರಾಮ ಜಾನಕೀರಮಣ ರಾಜೀವದಳನಯನ ankita vijaya vittala

ವಿಜಯದಾಸ
ರಾಮ ಜಾನಕೀರಮಣ ರಾಜೀವದಳನಯನ
ಧಾಮ ನಿಧಿವಂಶ ಸೋಮನಿಗೆ ಪ

ಪದುಮಶಾಲೆಯೊಳಗೆ ಪದುಮಗದ್ದುಗೆ ಹಾಕಿ
ಪದುಮನಾಭನು ಬಂದು ಕುಳಿತನು
ಪದುನುನಾಭನು ಬಂದು ಕುಳಿತನು ಎಡದಲ್ಲಿ ಪದುಮಾಕ್ಷಿ
ಪದುಮ ಸಾಧನೆ ಲಕುಮಿ ಒಪ್ಪಿದಳು. 1

ವಾರುಣಿ ಗಿರಿಜೆ
ಮೀನಕೇತನ ರಾಣಿ ಇಂದ್ರಾಣಿ ಮಿಕ್ಕಾನಲಿದಾಡುತಲಿ
ಮೀನಕೇತನ ರಾಣಿ ಇಂದ್ರಾಣಿ ನಕ್ಕು ನಲಿದಾಡುತಲಿ
ಆನಂದದಿ ಬಂದು ಕುಳಿತರು ತಮ್ಮ ಠಾಣೆಗೆ 2

ಚಿನ್ನದ ತಳಿಗೇಲಿ ಎಣ್ಣೆ ಅರಿಶಿಣ ಗಂಧ
ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ
ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ
ಹೆಣ್ಣುಗಳ ಮಧ್ಯೆ ಇಳಿಸಿದರು3

ತಂದೆ ತಾತನ ಬಳಿಯ ಮಂದಾಕಿನಿ ವಾಗ್ವಿಯ-
ರೊಂದಾಗಿ ಒಡಗೂಡಿ ರಂಗಯ್ಯನ ಕೈಗೆ
ಒಂದಾಗಿ ಒಡಗೂಡಿ ರಂಗಯ್ಯನ ಕೈಯೊಳಗೆ
ತಂದು ಅರಿಶಿಣ ಎಣ್ಣೆ ಗಂಧವಿತ್ತು4

ತಡಮಾಡಲಾಗದು ಕಡಲಶಯನ ನಿಮ್ಮ
ಮಡದಿಯಂಗಕ್ಕೆ ತೊಡೆವುದೆನಲು
ಮಡದಿಯಂಗಕ್ಕೆ ತೊಡೆವುದು ಎನಲಾಗಿ
ಕಡು ಹರುಷದಿ ಸತಿಯಳ ನೋಡಿದನು 5

ಎನ್ನರಸಿ ಹೊನ್ನರಸಿ ಪ್ರಾಣದರಸಿ ಪಟ್ಟದರಸಿ |
ಕನ್ಯೆ ಶಿರೋಮಣಿ ಪಾವನ ದೇಹಿ ||
ಕನ್ಯೆ ಶಿರೋಮಣಿ ಪಾವನ ದೇಹಳೆ ನಿನ್ನ |
ಕನ್ನಡಿ ಮುಖವ ತೋರರಿಷಿಣವ ನಾ ಹಚ್ಚುವೆ 6

ತಂದೆ ನಂದನರಿಗೆ ಬಂಧು ಬಳಗ ಸುತ್ತ |
ಹೊಂದಿದ ಜನರಿಗೆ ಹಲವರಿಗೆ ||
ಹೊಂದಿದ ಜನರಿಗೆ ಹಲವರಿಗೆ ಕದನ |
ತಂದು ಹಾಕುವಳೆಂದು ಹಚ್ಚಿದನು 7

ತೂಗಿಸಿಕೊಂಬುವಳೆ ದೌತ್ಯಕ್ಕೆ ಸಲ್ಲುವಳೆ |
ಬಾಗಿಲ ಕಾಯಿಸುವಳೆ ಬಲ್ಲಿದರ ||
ಬಾಗಿಲಕಾಯಿಸುವಳೆ ಬಲ್ಲಿದರನು ಬಿಡದೆ |
ಸಾಗರನ ಮಗಳು ಎಂದು ತೊಡೆದನು 8

ಇಂದಿರಾದೇವಿ ಬಾ ಮಂದಿರಾಂಬುಜ ರಾಮ |
ಸುಂದರ ಶ್ರೀವಾರಿ ಮಂಗಳಗಾತ್ರೆ ||
ಸುಂದರ ಶ್ರೀನಾರಿ ಮಂಗಳಗಾತ್ರೆ ಯೆಂದು |
ಅಂಗಜ ಜನಕನು ನಗುತಲಿದ್ದ 9

ರಮಣಿಯ ದೇಹಕ್ಕೆ ಕಮಲನಾಭನು ಎದ್ದು |
ವಿಮಲಕಸ್ತೂರಿ ಗಂಧವರಿಷಿಣ ಎಣ್ಣೆ ||
ವಿಮಲ ಕಸ್ತೂರಿ ಗಂಧವರಿಷಿಣ ಎಣ್ಣೆಯ |
ಕ್ರಮದಿಂದ ಲೇಪಿಸಿ ಊಟಣಿಸಾರಿ 10

ಸಾಕಾರಗುಣವಂತಿ ತ್ರಿಲೋಕದ ಜನನಿ |
ನಾಕಜವಂದಿತಳೆ ನಾಗಗಮನೆ ||
ನಾಕಜವಂದಿತಳೆ ನಾಗಗಮನೆ ಏಳೂ |
ಶ್ರೀಕಾಂತನ ಸೇವೆಯ ಮಾಡೆಂದರು 11

ಅಂದ ಮಾತನು ಕೇಳಿ ಗಂಧ ಅರಷಿಣ ಕೊಂಡು |
ನಿಂದು ಸಮ್ಮುಖದಲ್ಲಿ ರಂಗನ ನೋಡಿ |
ನಿಂದು ಸಮ್ಮುಖದಲ್ಲಿ ರಂಗನ ನೋಡಿ ಹಿಗ್ಗಿ |
ಚಂದ್ರವದನೆ ಪತಿಗೆ ಹಚ್ಚಿದಳು 12

ಗೋವಳರ ಎಂಜಲು ಆವಾಗ ತಿಂದವನೆ |
ಮಾವನ್ನ ಕೊಂದವನೆ ಮಾಯಾಕಾರ ||
ಮಾವನ್ನ ಕೊಂದವನೆ ಮಾಯಾಕಾರನೆ ನಿನ್ನ |
ಸೇವೆಗೆ ಶಕ್ತಳೆನುತ ಹಚ್ಚಿದಳು 13

ಬೆಣ್ಣೆ ಮೊಸರು ಕದ್ದು ಹೆಣ್ಣುಗಳ ಕೆಡಿಸಿ |
ಮುನ್ನೆ ತೊತ್ತಿನ ಮಗನ ಮನಿಯ ಉಂಡ ||
ಮುನ್ನೆ ತೊತ್ತಿನ ಮಗನ ಮನಿಯಲುಂಡ ಹಿಂದೆ |
ಹೆಣ್ಣಾಗಿ ಇದ್ದವನೆಂದು ಹಚ್ಚಿದಳು 14

ಎನ್ನರಸ ಚೆನ್ನರಸ ಪ್ರಾಣದರಸ ಪಟ್ಟಣದರಸ |
ಭಿನ್ನವಖಿಳ ಜೀವಕ್ಕೆನ್ನ ಒಡೆಯ ||
ಭಿನ್ನವಖಿಳ ಜೀವಕ್ಕೆನ್ನ ಒಡೆಯ ಸಲಹಿಂದು |
ಚೆನ್ನಾಗಿ ಅರಿಷಿಣ ಗಂಧ ಹಚ್ಚಿದಳು 15

ನಿತ್ಯ ಕಲ್ಯಾಣ ಪುರುಷೋತ್ತಮ ಸರ್ವೇಶ |
ಸತ್ಯಸಂಕಲ್ಪ ಸಿದ್ಧ ಅಪ್ರಮೇಯಾ ||
ಸತ್ಯಸಂಕಲ್ಪ ಸಿದ್ಧ ಅಪ್ರಮೇಯನೆಂದು |
ಮಿತ್ರೆ ಸರ್ವಾಂಗಕ್ಕೆ ಹಚ್ಚಿದಳು 16

ದೇವಿ ದೇವೇಶಗೆ ಈ ಉರುಟಣೆಯಿಲ್ಲ |
ಆವಾವ ಬಗೆ ಎಲ್ಲ ತೋರಿಸುತ್ತ ||
ಆವಾವ ಬಗೆ ಎಲ್ಲ ತೋರಿ ವಧು-ವರಗಳಿಗೆ |
ಹೂವು ಬಾಸಿಂಗವ ರಚಿಸಿದರು17

ಅಸುರ ವಿರೋಧಿ ವಸುದೇವನಂದನ |
ಪಶುಪತಿ ರಕ್ಷಕ ಪರಮ ಪುರುಷ ||
ಪಶುಪತಿ ರಕ್ಷಕ ಪರಮ ಪುರುಷ ಎಂದು |
ಹಸನಾಗಿ ಲೇಪಿಸಿ ಇತ್ತ ಜನರ 18

ಶೃಂಗಾರವಂತೇರು ರಂಗ ಶ್ರೀಲಕುಮಿಗೆ |
ಮಂಗಳಾರತಿ ಎತ್ತಿ ಹರಸಿದರು ||
ಮಂಗಳಾರತಿ ಎತ್ತಿ ಹರಸಿ ದೇವರಮನೆಗೆ |
ಅಂಗನೆಯಳ ಸಹಿತ ನಡೆಯೆಂದರಾಗ 1೯

ಎತ್ತಿಕೊಂಡನು ರಂಗ ಚಿತ್ತದ ವಲ್ಲಭೆಯ |
ಮತ್ತೆ ಸುಗಂಧಿಯರು ಹೊಸ್ತಿಲೊಳಗೆ ||
ಮತ್ತೆ ಸುಗಂಧಿಯರು ಹೊಸ್ತಿಲೊಳಗೆ ನಿಂದು |
ಪತ್ನಿಯ ಹೆಸರು ಪೇಳೆಂದರು ಆಗ 20

ಬೇಗ ಮಾರ್ಗವ ಸಾರಿ ತೂಗಲಾರನು ಇವಳ |
ಸಾಗಿ ಪೋಗುವನೆಂದು ಪೇಳುತಿರಲು ||
ಸಾಗಿ ಪೋಗುವನೆಂದು ಪೇಳುತಿರಲು ಸ್ತ್ರೀ ಕೂಟ |
ತೂಗವದೆಂತು ನಾಳೆ ನುಡಿಯೆಂದರು 21

ನಕ್ಕು ಸಂತೋಷದಲಿ ರುಕ್ಮಿಣಿ ಎಂದನು |
ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ ||
ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ ಎನಲು |
ಚಕ್ರಪಾಣಿ ಎಂದು ಪೇಳಿದಳು ಲಕುಮಿ 22

ಗಂಡ ಹೆಂಡತಿ ಪೋಗಿ ದಂಡ ಪ್ರಣಾಮಮಾಡಿ |
ಮಂಡಲದ ಚರಿತೆ ತೋರಿದರು ಆಗ ||
ಮಂಡಲದ ಚರಿತೆ ತೋರಿ ವಧು-ವರಗಳಿಗೆ |
ಕಂಡವರಿಗೆ ಮದುವೆಯೆನಿಸಿದರು 23

ದಂಪತಿಗಳು ಒಲಿದು ಇಂಪಾಗಿ ಉರುಟಣಿ |
ಸೊಂಪಾಗಿ ಮಾಡಿದರು ಅನೇಕವಾಗಿ ||
ಸಂಪತ್ತು ಕೊಡುವನು ವಿಜಯವಿಠ್ಠಲರಾಯಾ 24
***

pallavi

rAma jAnakIramaNa rAjIvadaLa nayana rAma nidhivamsha sOmanige

caraNam 1

paduma sAleaya oLage paduma gaddige hAki pasumanAbhanu bandu kuLitanu
eDadalli padumAkSi paduma sAdhane lakumi oppidaLu

caraNam 2

vANi bhArati khagapa rANI vAruNI girijE mInakEtana rANi indrANI mikkAdvaaru
Anandadi nakku nalidADutali Aga bandu kuLitaru thamma ThANage

caraNam 3

cinnada taLIgEli eNNe arishiNa gandha saNNa kumkuma jAti kastUri pongaLasa
saNNa kumkuma jAti kastUri pongaLasa heNNugaLa madhya hiLisidaru

caraNam 4

tande tAtana baLiya mandAkiNi vAgviyarondAgi oDagUDi rangayyana kaige
ondAgi oDagUDi rangayyana kaiyoLage tandu arashiNa eNNe gandhavittu

caraNam 5

taDa mADalAgadu kaDala shayana nimma maDadi yangakke toDevudenalu
maDai yangakke toDevudu enalAgi kaDu haruSadi satiyaLa nODidanu

caraNam 6

ennarasi honnarasi prANadarasi paTTadarasi kanye shirOmaNI pAvana dEhi
kanye shirOmaNI pAvana dEhaLe ninna kannaDi mukhava tOrarishaNava nA haccuve

caraNam 7

tande nandarige bandhu baLaga sutta hondida janarige halavarige
hondida janaige halavarige kadana tandu hAkuvaLendu haccidanu

caraNam 8

tUgisi kombuvaLe tyAgakke salluvaLe bAgila kAyisuvaLe ballidara
bAgila kAyisuvaLe ballidarenu biDade sAgarana magaLu endu toDedanu

caraNam 9

indirAdEvi bA mandirAmbuja rAma sundara shrI nAri mangaLagAtrE
sundara shrI nArI mangaLagAtreyendu angaja janakanu nagutaliddA

caraNam 10

ramaNIya dEhakke kamalAbhanu eddu vimala kastUri gandha variSiNa eNNe
vimala kastUri gandha variSiNa eNNeya kramadinda lEpisi uruTani sAri

caraNam 11

sAkAra guNavanti trilOkada jananI nAkaja vanditaLe nAga gamane
nAkagaja vanditaLe nAga gamane Elu shrIkAntana sEveya mADendiru
1
caraNam 2

anadmAtanu kELi gandha araSiNa koNDu nindu sammukhadalli rangana nODi
nindu sammukhadalli rangana nODi higgi candravadane patige haccidaLu
1
caraNam 3

gOvaLara enjalu AvAga tindavane mAvanna kondavane mAyakAra
mAvanna kondavane mAyakArane ninna sEvege shaktaLenuta haccidaLu
1
caraNam 4

beNNe mosaru kaddu heNNugaLa keDisi munne tottina magana maniyaluNDa
munne tottina magana maniyaloNDa hinde heNNAgi iddavanendu haccidaLu
1
caraNam 5

enna rasa cinnarasa prANadarasa paTTadarasa bhinnavakhiLa jIvakeena oDiya
bhinnavakhiLa jIvakennoDiya salahendu cennAgi araSiNa gandha haccidaLu
1
caraNam 6

nityakalyANa puruSOttama sarvEsha satya sankalpa siddha apramEyA
satya sankalpa siddha apramEyanendu mitre sarvAngakke haccidaLu
1
caraNam 7

dEvi dEva dEvEshage I utuTaNiyelli AvAva bage ella tOrisutta
AvAva bage ella tOri vadhu varagaLige hUvu bAsingava racisidaru
1
caraNam 8

asurara virOdhi vasudEva nandana pashupati rakSaka parama puruSa
pashupati rakSaka parama puruSa endu hasanAgi lEpisi itta janaru
1
caraNam 9

shrngAravantEru ranga shrIlakumige mangaLArati yetti harasidarO
mangaLArati yetti harasi dEvara manege anganeyaLa shita naDeyendarAga
20: ettikoNDanu ranga cittada vallabheya matte sugandhiyaru hostiloLage
matte sugandhiyaru hostiloLage nindu patniya hesaru pElendaru Aga
21: bEga mArgava sAri tUgalAreni evara sAgi pOguvenendu pELuttiralu
sAgi pOguvanendu pEluttiralu strI kUTa tUguvadendu nADe naDiyendaru
2
caraNam 2

makku santOSadali rukminiyendanu akkayya pELendu hemmakkaLella
akkayya pElendu hemmakkaLella enalu cakrapANi endu pELidaLu lakumi
2
caraNam 3

gaNDa heNDati pOgi daNDa pramANa mADi maNDalada carite tOridaru Aga
maNDalada carite tOri vadhuvaragaLige kaNDavarige maduvenisidaru
2
caraNam 4

dampattugaLu olidu impAgi uruTaNi sompAgi mADidaru anEkavAgi
sompAgi mADidavara kathegaLa pELalu sampattu koDuvanu vijayaviThalarAyar
***