ಗುರುರಾಮವಿಠಲ
ಗುರುಸಂತತಿಗೆ ನಮೊ ನಮೊ ಶ್ರೀ ಹರಿಶರಣರಿಗೆ ನಮೋ ನಮೋ ಪ
ಧರಣೀಸುರರಿಗೆ ನಮೋ ನಮೋ ಅ.ಪ
ವಿಜಯರಾಮದಾಸಗುರುವೆ ನಮೋ ನಮ ಭಜಕಜನರಸುರತರುವೆ ನಮೋ ವೃಜಿನ ಕಳೆವ ಭಾಗ್ಯನಿಧಿದಾಸ ನಮೋ ವಂದೇ ಸುಪ್ರೇಮದಾಸ ನಮೋ 1
ತಿರುಮಲಾಖ್ಯದಾಸರಿಗೆ ನಮೋ ನಮ ಗುರುಗೋಪಾಲರಾಯರಿಗೆ ನಮೋ ವರ ಭಾಗಣ ವಿಜಯರಾಯರಿಗೆ ನಮೋ ಪುರಂದರಾಖ್ಯ ಸುರಮುನಿಗೆ ನಮೋ 2
ವ್ಯಾಸಾಭಿಧಮೌನೀಶನಮೋ | ಹರಿ ದಾಸಶ್ರೀಪಾದರಾಯರಿಗೆ ನಮೋ ಭೂಸುರ ಪ್ರಿಯಹನುಮತೇ ನಮೋ ಸೀತೇಶ ಶ್ರೀಗುರುರಾಮ ವಿಠಲ ನಮೋ 3
***