ಅನಿಲದೇವನೆ ನಿನ್ನ ಅನುದಿನ ಸ್ತುತಿಸುವೆ
ದೀನಮನುಜನ ಜನುಮಗಳಳಿಸೋ ಪ
ಹನುಮ ಭೀಮ ಮಧ್ವರೂಪನೆ
ವಾಣಿವಂದಿತ ಪಾದಪದ್ಮನೆ
ಅಣುಮಹದ್ಛನರೂಪ ಚರಿತನೆ ಸಾನುರಾಗದಿ
ಕಾಯೋ ಈಗಲೇ ಅ.ಪ.
ಜಾನಕೀರಮಣನ ಪ್ರಿಯ ದಾನವಾಂತಕ ಕಾಯ
ಮಣಿಮಂತಾದಿಗಳ ಶೂಲ ಘನ ಪರಾಕ್ರಮ ಭೀಮ
e್ಞÁನದಾಯಕ ವಪುಷ ಆನಂದ ತೀರ್ಥಪ್ರಖ್ಯಾತ
ಮೌನಿಮಾನಸ ಚಂದ್ರ ಅನಿಮಿಶೇಷಗಳಾದಿಗೊಡೆಯ
ಭಾನುಕುಲತಿಲಕ ದೂತನೆ ಭಾನುಕೋಟಿತೇಜರೂಪನೆ
ಮಾನಿ ದ್ರೌಪದಿ ಪ್ರೀಯಗಂಡನೆ
ಗಣಿಸಲಾಗದ ಸತ್ವಮಂದಿರ
ಮೌನಿಗಳ ಕಲಶ ಪ್ರಾಯನೆ ಕನಕವರ್ಣದಶುಭಗಾತ್ರನೆ
ಧ್ಯಾನಗೋಚರ ವಿಶ್ವರೂಪನೆ ಮಾನದಿಂದಲಿ ಪಾಲಿಸಯ್ಯ 1
ವಾರಿಧಿ ದಾಟಿದಶೂರ ಭಾರಿವನವ ಕಿತ್ತವೀರ
ಜರಾಸಂಧನ ಕೊಂದ ಧೀರ ವೈರಿತಿಮಿರಕೆ ಸೂರ್ಯ
ಹರಿಯ ಹರಡಿದ ರಾಯ ಪರಾಶರಾತ್ಮಜಪ್ರಿಯ
ಕರಿರಾಜವರದನೆ ಪ್ರಥಮಾಂಗ ಭಾರತಿ ರಮಣಮುಖ್ಯಪ್ರಾಣ
ಹರಿಯು ಆಗಿ ಹರಿಯ ಒಲಿಸಿದೆ ವೀರಮಾರುತಿ ದೇವ ದೇವನೆ
ದುರುಳ ಕಲಿಯನು ಕೆಡಹಿ ಧರೆಯಲಿ ಕರುಳ
ಬಗೆದು ಧರಿಸಿ ಮೆರೆದೇ
ವೈರಿಮಾಯ್ಗಳ ಹಲ್ಲುಮುರಿಯುತ ಹರಿಯೆ ಪಿರಿಯನು
ಎಂದು ಸಾರಿದೆ
ಕರವ ಮುಗಿದು ಸಾರಿಬೇಡುವೆ ಚರಣ
ತೋರಿಸಿ ಕಾಯೊ ಸೂತ್ರನೆ 2
ಅಕ್ಷಯನ ಕೊಂದು ಮೆರೆದ ಲಕ್ಷ್ಮಣನ ಪ್ರಾಣವನುಳಿದ
ರುಕ್ಮಿಣೀ ಪತಿಯ ಕಿಂಕರನಾದ ಲಕ್ಷ್ಯವಿಲ್ಲದೆ ಸೈನ್ಯಗಳಳಿದಾ
ಪಕ್ಷವಾಹನನೆ ದೈವವೆಂದ ಮೋಕ್ಷಸಾಧನಗಳ ತೋರಿನಿಂದ
ದಕ್ಷರಾಕ್ಷಸ ವೈರಿ ಅನಿಲ ರಕ್ಷಿಸು ರಕ್ಷಿಸು ತತ್ವೇಶರೊಡೆಯ
ಲಕ್ಷ್ಮಿಮಾತೆಯಕಂಡುವಂದಿಸಿ ಲಂಕೆ ಸುಟ್ಟು ಸೊಕ್ಕೂ ಮುರಿದೆ
ಅಕ್ಷನಾಟವ ಸೋತುನಟಿಸಿ ಕಾಂತೆಗಭಯವ ನೀಡಿ ಪೊರೆದೆ
ಅಕ್ಷರೇಡ್ಯನ ಕರುಣದಿಂದಲಿ ಸೂತ್ರಭಾಷ್ಯವ ರಚಿಸಿ ಮೆರೆದೇ
ಇಕ್ಷುಚಾಪನ ಪಿತನ ತೋರಿಸೋ ದಕ್ಷಿಣಾಕ್ಷಿಗವತ್ಸರೂಪಿಯೆ 3
ವಾಮನನುಜನ ಗರ್ವವ ಮುರಿದ ಸೋಮಶೇಖರನ
ವಿಷಉಂಡುಪೊರೆದ
ರೋಮರೋಮಕೆ ಕೋಟಿ ಲಿಂಗಗಳುದುರಿಸಿ ಬಂದ
ಅಮರಪ್ರಾರ್ಥನೆಯಿಂದ ಮುನಿಯಾಗಿನಿಂದ
ಧಾಮಸಕಲ ಗುಣಕೆಂದೆನಿಕೊಂಡ
ಸಮಶೂನ್ಯ ಸತ್ವ ಪ್ರಭಾವ ತಾಮಸವರ್ಜಿತ
ಅನಾದಿ ಅಪರೋಕ್ಷದೇವ
ರಾಮಭಕ್ತಾಗ್ರೇಸರನೆನಿಸಿದ ತಾಮಸಾಂತಕ ವಿಜಯರಥಧ್ವಜ
ಭಾಮೆಯರೂಪವ ತಾಳಿಮೆರೆದ ಭೀಮವಿಕ್ರಮ ಸಪ್ತಶಿವಧರ
ಸಾಮಗಾಯನ ಲೋಲ ಕೃಷ್ಣನ ಪ್ರಿಯದಾಸ ಮೋದಮುನಿಯೆ
ಕಮಲೆಯರಸನ ಒಲುಮೆಯಿಂದಲಿ ಭಾವಿ ಬ್ರಹ್ಮನು
ಎನಿಸಿಮೆರೆಯುವೆ 4
ವಾನರರೂಪಿಲಿ ಬಂದ ಜಾನಕಿ ಗುಂಗುರಕೊಟ್ಟು ನಿಂದ
ಅನಲನಿಂದಲಿ ಅನುಜರ ಕಾಯ್ದು
ರಾಜಸೂಯವ ಮಾಡಿನಿಂದ
ಪ್ರಾಣಗೀಶಗೆ ಭೇದವು ಎಂದ ಸಾನಂದ ಗುಣಪೂರ್ಣ
ಹರಿಯು ಎಂದ
ಅನುಪಮ ಚರಿತ್ರ ಗುಣಗಣವೃಂದ
ವನಜನಾಭನಮುಖ್ಯ ಪ್ರತಿಬಿಂಬ
ಕ್ಷಣದಿ ಸಂಜೀವನವ ತಂದೆ ವಾನರರ ಪ್ರಾಣ ಉಳಿಸಿದೆ
ದ್ರೋಣಸುತನ ಅಸ್ತ್ರನಿಲಿಸಿದೆ ಸಾಮ ದೂರ ಖ್ಯಾತನಾಮನೆ
ಹೀನಮತಗಳ ಮುರಿದ ಮಧ್ವನೆ e್ಞÁನಿಜಯಮುನಿ
ವಾಯು ಅಂತರ
ಶ್ರೀನಿವಾಸ ಕೃಷ್ಣವಿಠಲನ ಜ್ಯೇಷ್ಠಕುವರ ವಿಶ್ವ ರಜ್ಜುವೆ
ಚರಣ ನಂಬಿದೇ 5
****