Showing posts with label ಹನುಮಂತ ಬಲವಂತ ಅತಿ ದಯವಂತಾ ಘನವಂತ ಕೀರ್ತಿವಂತ vijaya vittala. Show all posts
Showing posts with label ಹನುಮಂತ ಬಲವಂತ ಅತಿ ದಯವಂತಾ ಘನವಂತ ಕೀರ್ತಿವಂತ vijaya vittala. Show all posts

Thursday, 17 October 2019

ಹನುಮಂತ ಬಲವಂತ ಅತಿ ದಯವಂತಾ ಘನವಂತ ಕೀರ್ತಿವಂತ ankita vijaya vittala

ವಿಜಯದಾಸ
ಹನುಮಂತ ಬಲವಂತ ಅತಿ ದಯವಂತಾ |
ಘನವಂತ ಕೀರ್ತಿವಂತ ಅತಿ ಜಯವಂತಾ ||
ಅನುದಿನದಲಿ ನಿನ್ನ ನೆನೆಸುವೆ ಎನ್ನ ಮನದಾಸೆ |
ಯ ನೀಯೋ ದನುಜ ಕೃತಾಂತಾ ಪ

ಪಾವಮಾನಿ ಸತತ ಪಾವನ್ನ ಚರಿತಾ |
ಪಾವಕಾಂಬಕನುತಾ ಪ್ಲವಂಗನಾಥಾ ||
ದೇವ ಕರುಣಪಾಂಗಾ ಭಾವುಕತುಂಗಾ |
ಗ್ರೀವಾ ಶತಶೃಂಗ ಗ್ರಾವವೆ ಭಂಗಾ ||
ಕಾವಾ ವರವೀವಾ ಭೋದೇವ ಸಂಭವಾ | ಸು |
ಗ್ರೀವ ಸಹಾಯ ಸರ್ವ
ದೇವನರಸಿ ಯತಿವರ ಹಾರಿದಾ |
ಕೋವಿದಾ ಕಪಿವರ ದೇವಕಿ ತನುಜನಾ ||
ಮಾವನ ಮಾವನಾ | ಜೀವಕೆ ಮುನಿದನೆ |
ಜೀವೇಶ ಮತವನ ಪಾವಕಾ ಜಯ ಜಯ 1

ಧರಣಿಜಾತಿಗೆ ಭದ್ರಕರವಾದ ಮುದ್ರಾದರದಿಂದ ಇತ್ತ ನಿದ್ರಾ |
ಗರಳ ದುರುಳರ ವರವದ್ದಾ |
ನೆರದಲ್ಲಿ ಶಲ್ಯ ಎದುರ ಬರಲಾಗಿ ಗೆದ್ದಾ |
ಮರುತಾ ಸುಖ ಗುರುವೆ ಸುರತರುವೆ | ಫಲ |
ನಿರ್ಜರ ಗಣದಲ್ಲಿ ಇಹ |
ಪರದಲಿ ದೇವ |
ಶರಧೀ ಬಾಗಿದ ಧೀರಾ |
ಸೂನು ಆವಾಸ ಯೋಗಕೆ ಸಂ |
ಸುರನದಿ ದಾಟಿದಾ ಪರಮಹಂಸ 2

ಕರಡಿ ವಾನರಬಲಾ ನೆರಹಿ ಮಹಾ ಪ್ರಬಲ |
ಶಿರ ಹತ್ತುವುಳ್ಳವನ ಕುಲ ವರಿಸಿದಾ ಸುಬಲಾ |
ಕುರುಪತಿ ನಿಜ ತಮ್ಮ ಬರಲವನ ಹಮ್ಮು |
ಬೊಮ್ಮ ಪೊರೆವನೆ ನಮ್ಮ |
ಮರುತಾ ಸುಖ ಭರಿತಾ ಸಂಹರಗೈಸುವ | ಸಂ |
ಕರ ಗರ್ವಹರ ಸರಯು ತೀರದಲ್ಲಿದ್ದಾ |
ಪುರದಲ್ಲಿ ಮೆರದನೆ |
ಕರ ಕಮಲೋದ್ಭವ |
ವರ ವೃಕೋದರನೆ ವಿಜಯವಿಠ್ಠಲನ |ಶರಣರ ಪಾಲಾ ಬದರಿವಾಸಾ ಯಂತ್ರೇಶಾ 3
***

Hanumanta balavanta ati dayavanta |
Ganavanta kirtivanta ati jayavanta ||
Anudinadali ninna nenesuve enna manadase |
Ya niyo danuja krutanta ||pa||

Pavamani satata pavanna carita |
Pavakambakanuta plavanganatha ||
Deva karunapanga bavukatunga |
Griva satasrunga gravave banga ||
Kava varaviva bodeva sambava | su |
Griva sahaya sarva
Devanarasi yativara harida |
Kovida kapivara devaki tanujana ||
Mavana mavana | jivake munidane |
Jivesa matavana pavaka jaya jaya ||1||

Dharanijatige badrakaravada mudradaradinmda itta nidra |
Hara gunasamudra garala andu medda
Durulara varavadda |
Neradalli Salya edura baralagi gedda |
Maruta suka guruve surataruve | Pala |
Guruve balu mereve nirjara ganadalli iha |
Paradali deva |
Harushava toride kurupura kedisuta
Saradhi bagida dhira |
Vara pandava sunu avasa yogake san |
Charisi Sauryane suranadi datida paramahamsa ||2||

Karadi vanarabala nerahi maha prabala |
Sira hattuvullavana kula varisida subala |
Kurupati nija tamma baralavana hammu |
Muride balire bomma porevane namma |
Maruta suka barita samharagaisuva | sanm |
Kara garvahara sarayu tiradallidda |
Puradalli meradane |
Guruvyasamunigala kara kamalodbava |
Vara vrukodarane vijayaviththalana |
Saranara pala badarivasa yantresa ||3||
***