Showing posts with label ಹಾಳು ಮಾಡಿದ ಹನುಮ ಸಾಲು ವನಗಳ pranesha vittala. Show all posts
Showing posts with label ಹಾಳು ಮಾಡಿದ ಹನುಮ ಸಾಲು ವನಗಳ pranesha vittala. Show all posts

Tuesday, 19 November 2019

ಹಾಳು ಮಾಡಿದ ಹನುಮ ಸಾಲು ವನಗಳ ankita pranesha vittala

by ಪ್ರಾಣೇಶದಾಸರು
ಹಾಳು ಮಾಡಿದ ಹನುಮ ಸಾಲು ವನಗಳ |ಧಾಳಿ ಕೊಟ್ಟನಿತರ ಜನಕೆ |ಕೇಳಲಿದನು ದನುಜನೆಂದು ಪ

ಚರರು ಪೇಳಲವನು ಖತಿಯ |ಲಿರುವ ದಳವ ಕಳುಹಲದನು ||ತರಿದ ಭಯವಬಡದೆ ಮುಂದಕೆ |ಚರಣವಿಡದೆ ಬಹು ಸಮರ್ಥ 1

ಹರಿಜಿತ ಬಲು ಭರದಿ ಬರಲು |ಥರವು ಸಿಗುವದಿವನ ವಶಕೆ ||ಮೂರೇಳು ಮುಖನ ಕಾಂಬುವೆನೆನುತ |ಕರವಮರೆದ ಮರುತ ಕುವರ 2

ದಾನವ ಪತಿಯಲ್ಲಿ ಪೋಗಿ |ಏನು ಯೋಚನೆಯನ್ನು ಮಾಡದೆ ||ತಾನು ಗಂಭೀರ ಸ್ವರದಿ ಪೇಳ್ದ |ಪ್ರಾಣೇಶ ವಿಠ್ಠಲನ ಮಹಾತ್ಮೆಯನ್ನು 3
******