Showing posts with label ಎಂಥ ಉಪಕಾರಿಗಳು ಸುಜನರು ಶ್ರೀಕಾಂತ prasannavenkata. Show all posts
Showing posts with label ಎಂಥ ಉಪಕಾರಿಗಳು ಸುಜನರು ಶ್ರೀಕಾಂತ prasannavenkata. Show all posts

Friday, 8 November 2019

ಎಂಥ ಉಪಕಾರಿಗಳು ಸುಜನರು ಶ್ರೀಕಾಂತ ankita prasannavenkata

by ಪ್ರಸನ್ನವೆಂಕಟದಾಸರು
ಎಂಥ ಉಪಕಾರಿಗಳು ಸುಜನರು ಶ್ರೀಕಾಂತ ನಿನ್ನೊಲುಮೆಯ ಉಪಾಯದೋರುವರು ಪ.

ಅಜ್ಞಾನ ಕತ್ತಲೆಯೊಳು ಎಡಹಿ ನಡೆಗೆಟ್ಟಡಿ ಯವÀ? ರಿಗೆಸುಜ್ಞಾನವೆಂಬ ಅಂಜನವನಿಟ್ಟುಪ್ರಜ್ಞಾಪೂರ್ಣರ ಶಾಸ್ತ್ರಪ್ರಭೆಯಲ್ಲಿ ಪಥವಿಡಿಸಿಯಜೆÕೀಶ ನಿನ್ನ ಬಳಗವ ಕೂಡಿಸುವರೊ 1

ಭವತಾಪದಲಿ ಬಳಲಿ ಎದೆಯಾರಿದರಿಗೆ ಸನ್ನವಭಕ್ತಿಯಮೃತ ರಸವಾರಿನಿಧಿಯಸವಿದೋರಿ ಸ್ನಾನಪಾನವ ಕಲಿಸಿ ಸುಖವಿತ್ತುಸವಿಯದಾನಂದ ಉರದಲಿ ಪೊಯ್ದಿಡುವರು 2

ವಿಷಮ ವಿಷಯ ಧ್ಯಾನ ದಾರಿದ್ರ್ಯ ಪೀಡಿತಮಾನುಷರ ಜಂಗುಳಿಗೆ ವೈರಾಗ್ಯವೆಂಬಅಸಮಭಾಗ್ಯವನಿತ್ತುಭವಬಿಡಿಸಿ ಸಲಹಿ ಅಕಲ್ಮಷ ಪ್ರಸನ್ನವೆಂಕಟಪತಿಯ ನಂಬಿಸಿದರು 3
********