Showing posts with label ಎಷ್ಟಾದರು ಮುನ್ನ ಕೊಟ್ಟಲ್ಲದಿಲ್ಲ purandara vittala. Show all posts
Showing posts with label ಎಷ್ಟಾದರು ಮುನ್ನ ಕೊಟ್ಟಲ್ಲದಿಲ್ಲ purandara vittala. Show all posts

Tuesday, 3 December 2019

ಎಷ್ಟಾದರು ಮುನ್ನ ಕೊಟ್ಟಲ್ಲದಿಲ್ಲ purandara vittala

ರಾಗ ಕಾಂಭೋಜ. ಝಂಪೆ ತಾಳ

ಎಷ್ಟಾದರು ಮುನ್ನ ಕೊಟ್ಟಲ್ಲದಿಲ್ಲ ||ಪ||

ಪಡೆದಷ್ಟೆ ಅಲ್ಲದೆ ಬೇರೆ ಬಯಸಿದರಿಲ್ಲ ||ಅ||

ಯಾರಾರ ಮನೆಗಳಿಗೆ ಹೋಗಿ ಬಂದರು ಇಲ್ಲ
ಊರನಾಳುವ ದೊರೆಯ ಸೇರಿದರಿಲ್ಲ
ನೀರೊಳಗೆ ತಾ ಮುಳುಗಿ ಜಪವ ಮಾಡಿದರಿಲ್ಲ
ಹೇರಳ ವಿದ್ಯೆಗಳ ಕಲಿತರಿಲ್ಲ ||

ತನ್ನೊಡನೆ ಪುಟ್ಟಿಹರ ಭಾಗ್ಯವು ತನಗಿಲ್ಲ
ಹೆಣ್ಣಿನ ದೆಸೆಯಿಂದ ಬಾಹೊದಿಲ್ಲ
ಅನ್ಯರನು ನೋಡಿ ತಾ ಕರಗಿ ಕೊರಗಿದರಿಲ್ಲ
ತನ್ನ ಮಕ್ಕಳು ಪಡೆದ ಪುಣ್ಯ ತನಗಿಲ್ಲ ||

ಬಿಟ್ಟಿ ದುಡಿದು ಬಾಯ ಬಿಟ್ಟು ಬೇಡಿದರಿಲ್ಲ
ಕಟ್ಟಾಳು ತಾನಾದರೇನು ಫಲವಿಲ್ಲ
ಸೃಷ್ಟಿಯೊಳಗೆ ನಮ್ಮ ಪುರಂದರವಿಠಲನ
ಮುಟ್ಟಿ ಪೂಜಿಸಿದರುಣಲುಂಟು ಉಡಲುಂಟು ||
***

pallavi

eSTAdaru munna koTTalladilla

anupallavi

baDe daSTe allade bEre bayasidarilla

caraNam 1

yArAra manegaLige hOgi bandaru illa UranALuva doreya sEridarilla
nIroLage tA muLugi japava mADidarilla hEraLa vidyegaLa kalitarilla

caraNam 2

tannoDane puTTihara bhAgyavu tanagilla heNNina deseyinda bAhodilla
anyaranu nODi tA karagi koragidarilla tanna makkaLu paDeda puNya tanagilla

caraNam 3

biTTiduDidu bAya biTTu bEDidarilla kaTTALu tAnAdarEnu balavilla
shrSTiyoLage namma purandara viTTalana muTTi pUjisidaruNaluNTu uDaluNTu
***