ವೃಂದಾವನ ಪೂಜೆ ಗೋವಿಂದ |
ನಿನಗೆ ಬಂದು ಮಾಡುವೆನಯ್ಯ ಗೋವಿಂದ ||
ನಿನಗೆ ಬಂದು ಮಾಡುವೆನಯ್ಯ ಗೋವಿಂದ ||
ಛಂದವಾಗಿ ಸಾರಿಸಿ ಗೋವಿಂದ | ನಿಮಗೆ ರಂಗೋಲಿ ಹಾಕುವೆ ಗೋವಿಂದ |
ಶಂಖ ಚಕ್ರವ ಬರದೆ ಗೋವಿಂದ |
ನಿಮಗೆ ಸ್ವಸ್ತಿಕ ತೆಗೆದೆ ಗೋವಿಂದ |
ಪಟ್ಟೆ ಎಳಿ ಎಳಿ ಬತ್ತಿ ಗೋವಿಂದ |
ನಿಮಗೆ ದೀವಿಗೆ ಹಚ್ಚಿಟ್ಟೆ ಗೋವಿಂದ |
ಕ್ಯಾದಿಗೆ ಹೂವಿನ ಪೂಜೆ ಗೋವಿಂದ |
ನಿಮಗೆ ಕೇಶವರಾಯರ ಪೂಜೆ ಗೋವಿಂದ |
ಮಲ್ಲಿಗೆ ಹೂವಿನಪೂಜೆ ಗೋವಿಂದ |
ನಿಮಗೆ ಕೇಶವರಾಯರ ಪೂಜೆ ಗೋವಿಂದ |
ಕೃಷ್ಣವೇಣೀ ಉದಕ ಗೋವಿಂದ |
ನಿಮಗೆ ಗಿಂಡೀಲಿ ತಂದಿಟ್ಟೆ ಗೋವಿಂದ |
ಭಾಗೀರಥಿ ಉದಕ ಗೊವಿಂದ |
ನಿನಗೆ ಝಾರಿಲೆ ತಂದಿಟ್ಟೆ ಗೋವಿಂದ |
ಮನೋಹರದ ಉಂಡಿ ಗೋವಿಂದ |
ನಿನಗೆ ನೈವೇದ್ಯಕ್ಕೆ ತಂದಿಟ್ಟೆ ಗೋವಿಂದ |
ಮುಪ್ಪು ತಪ್ಪುವ ತನಕ ಗೋವಿಂದ |
ಎನಗೆ ಮುತ್ತೈದಿತನ ಕೊಡು ಗೋವಿಂದ |
ಶ್ರೀರಾಮ ರಾಮ ನೆಂಬೆ ಗೋವಿಂದ |
ಶ್ರೀರಾಮನ ವಡಗೊಂಡು ಪರಂಧಾಮಕೆ ಒಯ್ಯೋ ಗೋವಿಂದ |
ಕೃಷ್ಣ ಕೃಷ್ಣ ನೆಂಬೆ ಗೋವಿಂದ |
ಶ್ರೀ ಕೃಷ್ಣನ ವಡಗೊಂಡು ವೈಕುಂಠ ಪುರಕೊಯ್ಯೋ ಗೊವಿಂದ |
ಗೋವಿಂದ ಗೋವಿಂದ ಗೋವಿಂದ ಸ್ವಾಮಿ ಶ್ರೀ ಪುರಂದರವಿಠಲಾ ಗೋವಿಂದ
****
CHECK ತಾರತಮ್ಯ ನಮಸ್ಕಾರಗಳ ಕೃತಿ