ತೋರಿದ ನಿಜರೂಪ ಶ್ರೀಕೃಷ್ಣ ಆಹಾಗಾರ ಮಧ್ಯದಿ ವೃಜ ಚೋರ ಬಾಲಕನು ಪ
ಪೆಟ್ಟಿಗೆಯೊಳು ಕರವಿಟ್ಟು ಬೆಣ್ಣೆಯ ತೆಗೆದಷ್ಟು ಇಷ್ಟನು ಮೆದ್ದು ಬೊಟ್ಟು ಚೀಪುವನು 1
ಜರದ ಕುಂಚಿಗಿ ಗೊಂಡ್ಯಾ ಶಿರದಿ ತೂಗುತಲೆನ್ನತಿರುಗಿ ತಿರುಗಿ ನೋಡಿ ಮುಚ್ಚದೆ ಪೋದನು 2
ಇಂದು ತಿನ್ನುತಲಿಹ ಶ್ರೀಕೃಷ್ಣಒಂದು ಎರಡು ವಯ ಇಂದಿರೇಶನ ಕಂಡು ನಂದ ಭೋಗಿಪೆನು 3
****