Monday 2 August 2021

ತೋರಿದ ನಿಜರೂಪ ಶ್ರೀಕೃಷ್ಣ ಆಹಾಗಾರ ಮಧ್ಯದಿ ವೃಜ ಚೋರ ಬಾಲಕನು ankita indiresha

ತೋರಿದ ನಿಜರೂಪ ಶ್ರೀಕೃಷ್ಣ ಆಹಾಗಾರ ಮಧ್ಯದಿ ವೃಜ ಚೋರ ಬಾಲಕನು ಪ

ಪೆಟ್ಟಿಗೆಯೊಳು ಕರವಿಟ್ಟು ಬೆಣ್ಣೆಯ ತೆಗೆದಷ್ಟು ಇಷ್ಟನು ಮೆದ್ದು ಬೊಟ್ಟು ಚೀಪುವನು 1

ಜರದ ಕುಂಚಿಗಿ ಗೊಂಡ್ಯಾ ಶಿರದಿ ತೂಗುತಲೆನ್ನತಿರುಗಿ ತಿರುಗಿ ನೋಡಿ ಮುಚ್ಚದೆ ಪೋದನು 2

ಇಂದು ತಿನ್ನುತಲಿಹ ಶ್ರೀಕೃಷ್ಣಒಂದು ಎರಡು ವಯ ಇಂದಿರೇಶನ ಕಂಡು ನಂದ ಭೋಗಿಪೆನು 3

****


No comments:

Post a Comment