Showing posts with label ದೇವತಾಮಯನಾಗಿ ಸಕಲ ಪ್ರಾಣಿಗಳ ನಾನಾ ವಿಧದ ಪೂಜೆಗಳ ಕೈಗೊಂಬದೇವ vaikunta vittala. Show all posts
Showing posts with label ದೇವತಾಮಯನಾಗಿ ಸಕಲ ಪ್ರಾಣಿಗಳ ನಾನಾ ವಿಧದ ಪೂಜೆಗಳ ಕೈಗೊಂಬದೇವ vaikunta vittala. Show all posts

Sunday, 1 August 2021

ದೇವತಾಮಯನಾಗಿ ಸಕಲ ಪ್ರಾಣಿಗಳ ನಾನಾ ವಿಧದ ಪೂಜೆಗಳ ಕೈಗೊಂಬದೇವ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru

 ನಂಜನಗೂಡು


ದೇವತಾಮಯನಾಗಿ ಸಕಲ ಪ್ರಾಣಿಗಳ ನಾ-

ನಾ ವಿಧದ ಪೂಜೆಗಳ ಕೈಗೊಂಬದೇವ ಪ


ಕಪಟಮಾತಾರೂಪವಳವಡಿಸಿ ಕೊಲಲೆಂದು

ಚಪಲಗತಿಯಿಂ ಬಂದ ಪೂತನಿಯನು

ಉಪಮೆಯಿಂದಸುವರೆಸಿ ಘನಕುಚಂಗಳನೂಡೆ

ಅಪರಿಮಿತವಾದ ನಂಜುಂಡ ಮಹದೇವ 1


ಕಡಹದ ಮರದ ಕೊನೆಯನಡರಿ ಕಾಳಿಂದಿಯ

ಮಡುವಿನಲಿ ಧುಮುಕಿ ಪಣಿಪೆಡೆಯ ತುಳಿದು

ಮೃಡ ಮುಖ್ಯಸುರರುಘೇಯೆನೆ ಕೋಪಶಿಖಿಯಿಂದ

ಮಡುವಿಲುರುತರದ ನಂಜುಂಡ ಮಹದೇವ 2


ರುದ್ರಾಂತರಾತ್ಮ ವೈಕುಂಠಸಂಕರ್ಷಣ ಸ-

ಮುದ್ರ ಮಥನದ ಕಡೆಯಲುದಿಸಿ ಜಗವ

ರೌದ್ರವತಾರದಿಂದುರಿಯುರುಪುತಿರೆ ಕಂತು

ಸದೃಢಮನದಿ ನಂಜುಂಡ ಮಹದೇವ 3

***