ಕಾಖಂಡಕಿ ಶ್ರೀ ಕೃಷ್ಣದಾಸರು
ಭವ | ಬನ್ನ ಬಿಡಿಸಿ ಕಾಯೋ ಅಜಭವರಯ್ಯ ಪ
ಆಶೆಯೆಂಬ ನದಿಯಲ್ಲಿ | ಘನ | ಸೂಸುವ ಮನೋರಥವ ಸೆಳವಿನಲಿ | ವಾಸನೆ ತೆರೆಗಳಿ ಬರಲಿ | ಬಲು | ಘಾಸಿಯಾಗುವೆ ಸಿಕ್ಕಿ ಮೋಹ ಸುಳಿಯಲಿ 1
ಉಲಿವ ಕುತರ್ಕ ಪಕ್ಷಿಗಳು | ನುಂಗ | ನಕ್ರ ಕಾಮಕ್ರೋಧಗಳು | ಬಲಿದು ವಿವೇಕ ಧಡಿಗಳು | ಕೋರೆ | ಯಲಿ ಬೀಳೆ ಧೃತಿ ಶಾಂತಿಯೆಂಬಾ ವೃಕ್ಷಗಳು2
ಸಿರಿ | ಕಾಂತ ನಿನ್ನಯ ನಾಮ ಹಡಗ ತಂದು | ಪಂಥಗಾಣಿಸೋ ಗತಿಗಿಂದು | ದಯ | ವಂತ ಗುರು ಮಹಿಪತಿ ಪ್ರಭು ದೀನ ಬಂಧು3
***