Wednesday, 1 September 2021

ಭವ ಬನ್ನ ಬಿಡಿಸಿ ಕಾಯೋ ಅಜಭವರಯ್ಯ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಭವ | ಬನ್ನ ಬಿಡಿಸಿ ಕಾಯೋ ಅಜಭವರಯ್ಯ ಪ 


ಆಶೆಯೆಂಬ ನದಿಯಲ್ಲಿ | ಘನ | ಸೂಸುವ ಮನೋರಥವ ಸೆಳವಿನಲಿ | ವಾಸನೆ ತೆರೆಗಳಿ ಬರಲಿ | ಬಲು | ಘಾಸಿಯಾಗುವೆ ಸಿಕ್ಕಿ ಮೋಹ ಸುಳಿಯಲಿ 1 

ಉಲಿವ ಕುತರ್ಕ ಪಕ್ಷಿಗಳು | ನುಂಗ | ನಕ್ರ ಕಾಮಕ್ರೋಧಗಳು | ಬಲಿದು ವಿವೇಕ ಧಡಿಗಳು | ಕೋರೆ | ಯಲಿ ಬೀಳೆ ಧೃತಿ ಶಾಂತಿಯೆಂಬಾ ವೃಕ್ಷಗಳು2 

ಸಿರಿ | ಕಾಂತ ನಿನ್ನಯ ನಾಮ ಹಡಗ ತಂದು | ಪಂಥಗಾಣಿಸೋ ಗತಿಗಿಂದು | ದಯ | ವಂತ ಗುರು ಮಹಿಪತಿ ಪ್ರಭು ದೀನ ಬಂಧು3

***


No comments:

Post a Comment