Showing posts with label ರಥಾರೂಢ ವೆಂಕಟಗಿರಿನಾಯಕ ಪಥವ ತೋರೊ venkata. Show all posts
Showing posts with label ರಥಾರೂಢ ವೆಂಕಟಗಿರಿನಾಯಕ ಪಥವ ತೋರೊ venkata. Show all posts

Monday, 1 November 2021

ರಥಾರೂಢ ವೆಂಕಟಗಿರಿನಾಯಕ ಪಥವ ತೋರೊ ankita venkata

 ತುಪಾಕಿ ವೆಂಕಟರಮಣಾಚಾರ್ಯ

ರಥಾರೂಢ ವೆಂಕಟಗಿರಿನಾಯಕ ಪಥವ ತೋರೊ ಬೇಗ

ಮುಂದಿನ ಪಥವ ತೋರೊ ಬೇಗ ಪ.


ಪೃಥಾ ಕುಮಾರನ ರಥಾಶ್ವ ನಡಸುತ

ಕಥಾಕ್ರಮದಿ ಮನೋರಥಾವ ಸಲಿಸಿದ ಅ.ಪ.


ರಮಾಕಮಲಭವ ಉಮಾರಮಣ ಶ್ರೀ-

ಕ್ಷಮಾದಿ ನಾಯಕ ವಂದ್ಯ

ನಮೋ ನಮೋಯೆಂದೊದರುವೆ ಅನುದಿನ

ಕಮಲ ಪಾಲಿಸು 1


ನೃಪಾಧಮನು ಲಸದುಪಾಯದಿಂದಲಿ

ಅಪಾಯ ಚಿಂತನೆ ಮಾಡುತಿರೆ

ತಪೋನಿಧೀಶನದಪಾರ ಮಹಿಮನೆ

ಕೃಪಾಕಟಾಕ್ಷದಿ ಸುಪಾದ ತೋರಿದ 2


ಅಡಾವಡಿಯಿಂದ ಧಡಾಧಡನೆ ಬಂದು

ಒಡೆಯ ನಿನ್ನಡಿಗಳ ಮೇಲೆ ತನು

ಕೆಡಹಿದ ಮ್ಯಾಲೆ ತಡವ್ಯಾತಕೊ ಪದ

ಕೊಡೋ ಮೂಡಲಗಿರಿ ಒಡೆಯ ಶ್ರೀನಿಧೆ 3

***