Showing posts with label ಹರಿದಾಸ ಶ್ರೇಷ್ಠ ಶ್ರೀ ಪುರಂದರ ದಾಸಾರ್ಯರ prasannashreenivasa purandara dasa stutih. Show all posts
Showing posts with label ಹರಿದಾಸ ಶ್ರೇಷ್ಠ ಶ್ರೀ ಪುರಂದರ ದಾಸಾರ್ಯರ prasannashreenivasa purandara dasa stutih. Show all posts

Thursday, 5 August 2021

ಹರಿದಾಸ ಶ್ರೇಷ್ಠ ಶ್ರೀ ಪುರಂದರ ದಾಸಾರ್ಯರ ankita prasannashreenivasa purandara dasa stutih

..

kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು

ಶ್ರೀ ಪುರಂದರ ದಾಸಾರ್ಯ ಸ್ತೋತ್ರ


ಹರಿದಾಸ ಶ್ರೇಷ್ಠ ಶ್ರೀ ಪುರಂದರ ದಾಸಾರ್ಯರ

ಸರಸೀರುಹಾಂಘ್ರಿಯಲಿ ಶರಣಾದೆ ಸತತ ||

ವೈರಾಗ್ಯ ಯುಕ್ ಜ್ಞಾನ ಭಕ್ತ್ಯಾದಿ ಸಂಪತ್ತು

ಕರುಣದಲಿ ಒದಗಿಸಿ ಶ್ರೀಕೃಷ್ಣ ನ್ನೊಲಿಸುವರು ||

ಈ ಪುಣ್ಯತಮ ಭರತಖಂಡದಲಿ ಪ್ರಖ್ಯಾತ ||

ಕೃಪಾಂಬುಧಿ ಜಗನ್ನಾಥವಿಠ್ಠಲ ರುಕ್ಮಿಣೀಶ ||

ರೂಪಗುಣ ಭೇಧವಿಲ್ಲದ ಪೂರ್ಣನಿರ್ದೋಷ

ಶ್ರೀಪ್ರಸನ್ನ ವೇಂಕಟನೇ ನಮೋ ಪದ್ಮಾವತೀಶ 1

ಪುರುಷರೂಪತ್ರಯ ಕ್ಷರಾ ಕ್ಷರೋತ್ತಮ ಭೂಮ |

ಅರದೂರ ಗುಣನಿಧಿ ನಾರಾಯಣಗೆ ಶರಣು |

ಸುಪ್ರೇಮಾತಿಶಯದಲಿ ಸದಾ ಪತಿಯ ಸೇವಿಸುವ

ನಿರಾಮಯಳು ಸುಖಪೂರ್ಣಲಕ್ಷ್ಮಿಗೆ ಶರಣು 2

ದ್ವಿಷೋಡಶ ಲಕ್ಷಣದಿ ರಾಜಿಪವಿಧಿ

ದಶಪ್ರಮತಿಗು ವಾಣಿ ಭಾರತಿಯರಿಗು ನಮಿಪೆ

ಶ್ರೀಶನ ಪೂರ್ಣಾನುಗ್ರಹ ಪೂರ್ಣಪಾತ್ರರು

ಉತ್ಕøಷ್ಟರಜು ಸ್ತೋಮ ಚರಣಕಾನಮಿಪೆ 3

ಉತ್ತಮ ಶ್ಲೋಕನ್ನ ಜಪಿಸಿ ಪೂಜಿಪ ಶಿವ

ಹೊತ್ತು ಸೇವಿಪಗರುಡ ಪರ್ಯಂಕ ಶೇಷ

ಭಕ್ತಾಗ್ರಣಿ ಈ ಸರ್ವರಿಗು ನಮಿಸುವೆನು

ಮಾಧವನ ಷಣ್ಮುಹಿಷಿಯರಿಗು ನಮಿಪೆ 4

ವಿಮಲ ಚರಿತರು ಉಮಾಸೌಪರ್ಣಿ ವಾರುಣಿಗು |

ಅಮರೇಂದ್ರ ಮನ್ಮಥಮುನಿಗು ನಮನಮಾಡಿ

ನಮಿಸುವೆ ಅಹುಪ್ರಾಣದೇವನಿಗೆ ಗುರು ಶಚಿ

ಕಾಮಸತಿ ಸುತದತ್ತ ಸ್ವಾಯಂಭುವಗೆ 5

***