ಕಾಖಂಡಕಿ ಶ್ರೀ ಕೃಷ್ಣದಾಸರು
ಜಯದೇವ ಜಯದೇವ ಜಯದೀನದಯಾಳಾ ಜಯಜಯ ಶ್ರೀಗುರು ಮಹಿಪತಿ ಭವತಾರಕ ಲೀಲಾ ಪ
ಮರವಿನ ಕತ್ತಲಿಯೊಳಗೆ ಮುಂದುಗಾಣದಲಿರಲಿ ಅರವಿನದೀಪವ ಹೆಚ್ಚಿ ದೋರುತಲೀ ಸ್ಥಿರವನು ಗೊಳ್ಳದ ಚಿತ್ತವ ಭಜನಿಗೆಲಿಸುತಲಿ ಹರಿಸಿದ ವಿದ್ಯದಗೃಂಥಿಯ ಸಂಶಯ ಬಿಡಿಸುತಲಿ 1
ಪರಿಪರಿಯಿಂದಲಿಗರದು ಬೋಧನಾಮೃತನುಡಿಯಾ ಅರಹಿಸಿಯೋಗದ ಮಾರ್ಗವ ಸಾಂಖ್ಯದನಿಲ್ಲ ಕಡಿಯಾ ಕರಣೀಂದ್ರಿಯಗಳ ವಡದಾಸ್ವಾನಂದದಯಡಿಯಾ ಕರುಣಿಸಿ ವಿಶ್ವಂಭರಿತದ ತೋರಿದೆ ಇತ್ಥಡಿಯಾ 2
ನಿನಗುತ್ತೀರ್ಣವಕಾಣದೇ ತನುವಾರತಿ ಮಾಡೀ ಮನವೇದೀಪವು ಸದ್ಭಾವನೆ ಆಜ್ಯನೀಡಿ ಅನುದಿನ ಬೆಳಗುವ ನಂದನುಮಹಿಮೆಯ ಕೊಂಡಾಡಿ ಚಿನುಮಯಸುಖದೊಳು ಬೆರೆದಾಹಂಭ್ರಮ ಈಡಾಡಿ3
****