..
Kruti by ಸಿರಿಗುರುತಂದೆವರದವಿಠಲರು sirigurutandevarada vittala
ಮಂಗಳವೆನ್ನಿರೆ ಅಂಗನೆಯರೆಲ್ಲಅಂಗಜಪಿತ ಸಿರಿ ರಂಗನಿಗೇ ಮಂಗಳಾಂಗನಿಗೆ ಪ
ಚೋರ ತಪನ ಕೊಂದು ಭಾರ ಬೆನ್ನಿಲೆ ಪೊತ್ತು ದಾಟಿಸಿತಂದಂದು ನಾರಶಿಂಹನಿಗೆ ಸುರಶೂರ ಸಿಂಹನಿಗೆ 1
ಬಲಿಯ ದಾನವ ಬೇಡಿ ಕುಲವ ಸಂಹರಿಸುತಶಿಲೆಯನುದ್ಧರಿಸಿದ ಚೆಲುವ ಬಾಲನಿಗೆ ಗಾನಲೋಲ ಕೃಷ್ಣನಿಗೆ 2
ಪುರವ ನಾರಿಯರ ವರವ್ರತ ಕೆಡಿಸಿದತುರಗವಾಹನ ತಂದೆವರದವಿಠಲಗೆ ಬಂದ ದುರಿತ ನಾಶಕಗೆ 3
***