ankita janakiramana
ರಾಗ: ಧನ್ಯಾಸಿ ತಾಳ: ಆದಿ
ತುಂಗಾಸ್ನಾನ ಗುರುಗಳಧ್ಯಾನ ಮುಕ್ತಿಗೆ ಸೋಪಾನ ಪ
ತುಂಗಾ ತೀರದಿ ಶೋಭಿಪ ವರ
ಮಂತ್ರಾಲಯವೇ ಇದಕೆ ಸ್ಥಾನ ಅ. ಪ
ಹರುಷದಿಬಂದು ನದಿಯಲಿಮಿಂದು
ಗುರುದಯದಿಂದೆಂದೂ
ಮರೆಯೆವು ಈ ಆನಂದವನೆಂದೂ
ಸಾರುವಭಕುತರೆ ಇದಕೆ ಸಾಕ್ಷಿ 1
ಪರಿಪರಿ ಕ್ಲೇಶಪಟ್ಟು ಬರುವ ಭಕುತರು
ವರಗಳಪಡೆವುದೇ ಸಾಕ್ಷಿ
ನಾರಸಿಂಹನ ದಿವ್ಯ ಭಕುತ ಶ್ರೀ
ಪ್ರಹ್ಲಾದರಿಲ್ಲಿರುವುದೇ ಇದಕೆ ಸಾಕ್ಷಿ 2
ದೀನಭಕುತರಾಭೀಷ್ಟವ ಸಲಿಸುವ
ಘನರಾಘವೇಂದ್ರರೇ ಸಾಕ್ಷಿ
ಜಾನಕಿರಮಣ ಶ್ರೀಮೂಲರಾಮನಿಲ್ಲಿ
ಅನುಪಮ ಸೇವೆಯಗೊಳ್ವುದೇ ಸಾಕ್ಷಿ 3
***