ಪುರಂದರದಾಸರು
ನೆಚ್ಚಬೇಡ ಭಾಗ್ಯವನು ಹುಟ್ಟುಗೊಂಡ ಮನುಜಾವೆಚ್ಚವಾಗಿ ಹೋಗುವುದು ಏಸೊಂದು ಬಗೆಯಲಿ ಪ.
ಮುತ್ತು - ಮಾಣಿಕ - ನವರತ್ನದ ಗದ್ದುಗೆಯುಎತ್ತ ನೋಡಲು ಸಿರಿಕೋ ಎನುತಲಿಸತ್ಯ ಹರಿಶ್ಚಂದ್ರ ಮತ್ತೆ ಸುಡುಗಾಡಿನಲ್ಲಿಎತ್ತುವ ಹಣೆಯಕ್ಕಿ ಹಾಗದ ಕಾಸ 1
ದೇವತೆಗಳ ಕೈಯ ಸೇವೆಯ ಕೊಳುತಿರ್ದರಾವಣನ ಬದುಕು ಮತ್ತೇನಾಯಿತು?ಜೀವದ ಪರಿಯರಿತು ನಾವು ದೊರೆಯೆಂಬುವುದೆಸಾವಿನ ಮನೆಹೊಕ್ಕು ಸಾಹಸ ಪಡಲೇಕೆ 2
ಹದಿನೆಂಟುಕೋಟಿ ಧನ ಉದಯಕೆ ಬರುತಿರಲುಒದಗಿತೆ ಆ ರಾಶಿ ದಿನ ಕರ್ಣಗೆ ?ತುದಿ ಮಧ್ಯಾಹ್ನಕ್ಕೆ ದರಿದ್ರನೆನಿಸುವಇದರಿಂದ ಕಡೆಗಂಡರಾರು ಜಗದೊಳಗೆ ? 3
ಬೆಳ್ಳಿಯ ಗಿಣಿಲು ಬಂಗಾರದಹರಿವಾಣಕುಳಿತಲ್ಲಿ ಕನಕದ ರಾಶಿಗಳುಗಳಿಗೆಗೆ ಈ ಭಾಗ್ಯ ಕಾಳಬೆಳುದಿಂಗಳುಉಳಿದವು ನಾ ಕಾಣೆ ಚಿರಲಕ್ಷ್ಮಿಯೆನಲು 4
ಇಂತು ಈ ಪರಿಯಲನಂತರು ಹೋದರುಎಂತು ಪೇಳಲಿಅವರ ಪೆಸರುಗಳ ?ಚಿಂತಾಯತ ಶ್ರೀ ಪುರಂದರವಿಠಲನಸಂತತ ಪಾದಕಮಲವ ಭಜಿಸೊ ಮನುಜಾ 5
**********