Showing posts with label ಏನೆಲವೋ ದೈವಾ ವೈಕುಂಠನಾಥ vijaya vittala. Show all posts
Showing posts with label ಏನೆಲವೋ ದೈವಾ ವೈಕುಂಠನಾಥ vijaya vittala. Show all posts

Wednesday, 16 October 2019

ಏನೆಲವೋ ದೈವಾ ವೈಕುಂಠನಾಥ ankita vijaya vittala

ವಿಜಯದಾಸ
ಏನೆಲವೋ (ಯೇನೆಲವೊ) ದೈವಾ ವೈಕುಂಠನಾಥ
ನೀ ನಾರಿವೇಷವನು ಧರಿಸಿದ ಬಗೆಯೇನೊ ಪ

ದೈತ್ಯರು ಎರಗಿ ದೇವತತಿಗಳು ತಲ್ಲಣಿಸೆ |
ಮಿತ್ರಭಾವದಲಿವರು ಕೂಡಲಿಟ್ಟು |
ಇತ್ತಂಡದ ನಡುವೆ ಸುಧೆಯ ಬಡಿಸುವೆನೆಂದು |
ಮಿತ್ರವೇಷವ ಧರಿಸಿ ಸುರರ ಸಲಹಿದ ಬಗೆಯ 1

ಶಿವಗೆ ವೃಕಾಸುರನು ಬೆಂಬಿಡದೆ ತನ್ನುರಿ |
ಕರವ ನೀಡುವೆನೆಂದು ಬರಲಾಗಲು ||
ಅವನೀಶ ಭವಹರ ಕೇಶವ ನೀನೆ ಗತಿಯೆನಲು |
ಯುವತಿ ವೇಷವ ಧರಿಸಿ ಶಿವನ ಸಲಹಿದ ಬಗೆಯಾ 2

ಅಂದು ಮಾಡಿದ ಚರಿತೆ ಭಕ್ತಜನರು ಬಂದು |
ಒಂದೊಂದನ ನುಡಿದರನ ಲೀಲೆಂದು |
ಇಂದು ಸತಿವೇಷವನು ಧರಿಸಿ ತೋರಿದಿಯೋ ಪು
ರಂದರ ದಾಸರಿಗೊಲಿದೆ ವಿಜಯವಿಠಲ ಚಲುವಾ3
********