ಮಲಗಿದನು ಶ್ರೀರಂಗ ಶ್ರೀರಂಗ ಪ
ಕಲಿಜನರ ನೋಡುತಲಿ ಅಳುಕಿದಾಮನದಿಂದ ಅ.ಪ
ಜೀವ ಜಗಬಿಂಬನಿಗೆ ಯಾವುದೈ ಆಯಾಸ
ಕಾವ ಸಚರಾಚರವ ಶ್ರೀವರನಿಗುಂಟೆ ನಿದ್ರೇ
ಸಾರ್ವಭೌಮನಿಗೆ ಕ್ಷುದ್ರಜೀವ ಸಮರೆಂತೆಂಬ
ಕೋವಿದಾಭಾಸಗಣ ಸೇವೆಕೊಳ್ಳನು ಎಂದು 1
ವೈದೀಕರೆನ್ನುತಲಿ ವೇದಮರ್ಮವ ತಿರುಚಿ
ಬೌದ್ಧಮತವನೆ ಮತ್ತೆ ಬೊಧಿಪರೆ ಈ ಜನರು
ಸಾಧು ಸಮ್ಮತ ಮಧ್ವವಾದ ನೋಡದೆ ಬರಿದೆ
ಸಾಧು ವೇಷದಿ ತಿರಿಪ ಗರ್ದಭರ ಕಂಡಂಜಿ 2
ನಾಮಜಪವೇನಿಲ್ಲ ನೇಮ ನಿಷ್ಠೆಗಳಿಲ್ಲ
ನಾಮ ಹಾಕುವ ದೊಡ್ಡ ನೇಮವಂದೇಯಿಹುದೆ
ಹೇಮಗೋಸುಗ ತತ್ವ ಹೋಮಮಾಡುವ ಎಲ್ಲ
ಕಾಮ ಕಾಮಿನಿ ಜನರ ವಾಮಗುಣಗಣನೆನೆದು 3
ಅನ್ನದೇವನ ತೊರೆದು ಅನ್ನಕೊಂಬರೆ ಕ್ರಯಕೆ
ಅನ್ಯರೆನ್ನದೆ ಹರಿಗೆ ಇನ್ನು ಘಳಿಪರೆ ನಿರಯ
ಹುಣ್ಣಂತಮವಿಪರೀತ ಕಣ್ಣಿಂದ ನೊಡದವ
ಧನ್ಯಧನ್ಯನು ಎಂದು ಕಣ್ಣುಗಳ ಮುಚ್ಚುತಲಿ 4
ಶ್ರೀಲೊಲ ಮಲಗಿದಡೆ ಏಳುವುದು ಜಗವೆಂತು
ವ್ಯಾಳಗುರುಹೃಸ್ಥ “ಶ್ರೀ ಕೃಷ್ನವಿಠಲ”ನೆ
ತಾಳಿ ಕೃಪೆ ಹೃದಯದಲಿ ಶೀಲರೂಪವ ತೋರೊ
ಕಾಲನಿಗೆ ನೀ ಕಾಲ ವಾಲಗವ ಕೈಕೊಂಡು 5
****