Showing posts with label ಶ್ರೀಮತೇ ಶ್ರೀ ಭಾಷ್ಯಕರಾಯನೇ ಮಾಮವ ದೇವಾ ಕರುಣಿಸು ಮಹರಾಯನೇ tulasiramadasa. Show all posts
Showing posts with label ಶ್ರೀಮತೇ ಶ್ರೀ ಭಾಷ್ಯಕರಾಯನೇ ಮಾಮವ ದೇವಾ ಕರುಣಿಸು ಮಹರಾಯನೇ tulasiramadasa. Show all posts

Sunday, 5 September 2021

ಶ್ರೀಮತೇ ಶ್ರೀ ಭಾಷ್ಯಕರಾಯನೇ ಮಾಮವ ದೇವಾ ಕರುಣಿಸು ಮಹರಾಯನೇ ankita tulasiramadasa

 ಚನ್ನಪಟ್ಟಣದ ಅಹೋಬಲದಾಸರು

ಶ್ರೀಮತೇ ಶ್ರೀ ಭಾಷ್ಯಕರಾಯನೇ [ಮಾಮವ] ದೇವಾ ಕರುಣಿಸು ಮಹರಾಯನೇ ಪ 


ಮಂತ್ರ ರಹಸ್ಯದಿ ಜ್ಞಾನ ತ್ರಯಂಗಳ ನಿಂತು ನೀ ಕೃಪೆ ಮಾಡಿದೇ ಅ.ಪ 


[ವರ]ತತ್ವದುಯ್ಯಾಲನಾಡಿದೆ ಭರಗೈದು ಬಂದಿಲ್ಲಿ ಪರತತ್ವವನು ಗೂಡಿದೇ 1 

ಸಿರಿಮಾತೇ [ಮೂಲಕ] ಹರಿಯಾಜ್ಞೆಯನುಗೊಂಡು ಪರಮಭಕ್ತರಿಗೆಲ್ಲಾ ಪ್ರತ್ಯಕ್ಷವಾದಂಥಾ ಪರಮಪದವಿ ಮಾಡಿದೇ 2 

ಯದುಶೈಲವಾಸದೊಳಧಮರಾದವರಿಗೆ ಸುಧೆಯ ಸುರಿದು ತೋರಿದೆ ಸದುಪಾಯದಿಂ ಬಂದು ಸರ್ವಸ್ವತಂತ್ರದೊ ಳಿದು ನೋಡೆನುತ ಸಾರಿದೆ 3 

ಪರಕಾಲಗುರು ಸರ್ವತಿರುಮಳಿಶಯ್ಯಾಳ್ವಾರೆಂ ಬೆರುಮಾನರಡಿಯಾದೆನೈ ಗುರುಕುಲದೊಳಗೆನ್ನ ಕರೆದಿತ್ತ ಹರಿನಾಮ ನುಡಿಯದೆ ನಾ ಹೋದೆನೈ 4 

ಅದ್ವೈತ ಕುಲವನ್ನು ಪರಿಶೋಧಿಸಿ ಬಿಟ್ಟು ಶ್ರೀ ಮದ್ರಾಮಾನುಜಾಚಾರ್ಯನೇ ಮದ್ಗುರುವಾದ ಶ್ರೀತುಲಶೀರಾಮದಾಸ [ರೈ ದಾಸಕುಲತೂರ್ಯರೈ] 5

***