Showing posts with label ಮಂಗಳಂ ಶ್ರೀಭಾರತೀಶಗೇ ಬಂಗಾರನೇತ್ರಗೆ ankita gopalakrishna vittala. Show all posts
Showing posts with label ಮಂಗಳಂ ಶ್ರೀಭಾರತೀಶಗೇ ಬಂಗಾರನೇತ್ರಗೆ ankita gopalakrishna vittala. Show all posts

Monday, 2 August 2021

ಮಂಗಳಂ ಶ್ರೀಭಾರತೀಶಗೇ ಬಂಗಾರನೇತ್ರಗೆ ankita gopalakrishna vittala

ಮಂಗಳಂ ಶ್ರೀ ಭಾರತೀಶಗೇ

ಬಂಗಾರನೇತ್ರಗೆ ಪ.

ರಂಗನಾಥನ ದಾಸೋತ್ತಮಗೆ

ಶೃಂಗಾರದಿ ಶೋಭಿಪಗೆ ಅ.ಪ.

ಬಿಟ್ಟುನೇಮ ತೊಟ್ಟು ವಸನ

ಇಟ್ಟು ಆಭರಣ

ಶ್ರೇಷ್ಠ ಪದಕ ಹಾರ ಧರಿಸಿ

ದಿಟ್ಟತನದಿ ನಿಂತ ಧೀರಗೆ 1

ಹನುಮ ಭೀಮ ಮುನಿ ಮ

ಧ್ವನಿಗೆ ಘನಗುಣಜ್ಞಗೆ

ಚಿನುಮಯಾತ್ಮ ರಾಮಕೃಷ್ಣ

ಮುನಿದ್ವೈಪಾಯನನು ಪೂಜಿಪಗೆ 2

ಶ್ರೀಪತಿಯ ಭಕ್ತನಿಗೆ

ವ್ಯಾಪಕತ್ವಗೆ

ಗೋಪಾಲಕೃಷ್ಣವಿಠ್ಠಲನ

ರೂಪ ಮನದಿ ಸ್ಮರಿಸುವವಗೆ 3

****