Showing posts with label ರಕ್ಷಿಸೋ ಶ್ರೀಶ ಶ್ರೀ ಶ್ರೀನಿವಾಸ ಅಕ್ಷಯ ಗುಣಪೂರ್ಣ kamalanabha vittala. Show all posts
Showing posts with label ರಕ್ಷಿಸೋ ಶ್ರೀಶ ಶ್ರೀ ಶ್ರೀನಿವಾಸ ಅಕ್ಷಯ ಗುಣಪೂರ್ಣ kamalanabha vittala. Show all posts

Thursday 5 August 2021

ರಕ್ಷಿಸೋ ಶ್ರೀಶ ಶ್ರೀ ಶ್ರೀನಿವಾಸ ಅಕ್ಷಯ ಗುಣಪೂರ್ಣ ankita kamalanabha vittala

 ..


kruti by Nidaguruki Jeevubai


ರಕ್ಷಿಸೋ ಶ್ರೀಶ ಶ್ರೀ ಶ್ರೀನಿವಾಸ

ಅಕ್ಷಯ ಗುಣಪೂರ್ಣ ಪಕ್ಷಿವಾಹನ ದೇವ

ಅಕ್ಷರೇಶಾತ್ಮಕ ಮೋಕ್ಷ ದಾತನೆ ಹರಿ ಪ


ರಕ್ಷಿಸೀಕ್ಷಣ ಲಕ್ಷ್ಮೀರಮಣ

ಈಕ್ಷಿಸೀಗಲೆ ರಕ್ಷಿಸೆಮ್ಮನು

ಕುಕ್ಷಿಯೊಳು ಜಗ ರಕ್ಷಿಸುವ ಹರಿ

ಸೂಕ್ಷ್ಮ ಸ್ಥೂಲದೊಳಿರುವ ದೇವ ಅ.ಪ


ಇಂದಿರೆರಮಣ ಗಜೇಂದ್ರವರದ ಹರಿ

ಮಂದಹಾಸದಿ ಭಕ್ತವೃಂದವ ಪಾಲಿಪ

ನಂದಕಂದನೆ ಬಂದು ರಕ್ಷಿಸು

ಇಂದಿರಾ ಭೂದೇವಿ ರಮಣನೆ

ಸುಂದರಾಂಗನೆ ಸುಮನ ಸರ ಹೃ-

ನ್ಮಂದಿರದಿ ಶೋಭಿಸುವ ದೇವ 1

ನಂದನಕಂದ ಮುಕುಂದ ಹರೇ ಕೃಷ್ಣ

ಕಂದರ್ಪ ಜನಕನೆ ಕರುಣಾನಿಧೆ ಹರಿ

ಮಂದರೋದ್ಧರ ಮದನ ಜನಕÀ

ಸುಂದರಾಂಗ ಶ್ರೀಸುಮನಸರ ಪ್ರಿಯ

ಬಂಧಮೋಚಕ ಭವವಿದೂರನೆ

ಸಿಂಧುಶಯನ ಸರ್ವೇಶ ಶ್ರೀಹರಿ 2


ಕನಕ ಗರ್ಭನ ಪಿತ ಕರುಣಿಸೊ ನಿನ್ನಧ್ಯಾನ

ಕನಸುಮನಸಲಿ ನಿನ್ನ ಸ್ಮರಣೆ ಎನಗಿತ್ತು

ಕನಲಿಕೆಯ ಕಳೆದೆಮ್ಮ ಕ್ಷಣ ಬೆಂ-

ಬಿಡದೆ ಕಾಪಾಡೆನ್ನುತ ಪ್ರಾರ್ಥಿಪೆ

ಕಮಲನಾಭವಿಠ್ಠಲನೆ ಕರುಣದಿಕಮಲ ಮುಖಿಯೊಡಗೂಡಿ ಹರುಷದಿ 3

***