ರಾಗ - : ತಾಳ -
ವೆಂಕಟೇಶ ತೋರೊ ಪಾದ ಪಂಕಜವನು ll ಪ ll
ಮಂಕುಮತಿಯ ಬಿಡಿಸಿ ನಿನ್ನ ಕಿಂಕರನೆಂದೆನಿಸೊ ll ಅ ಪ ll
ಕಲಿಯುಗದೊಳು ನೀನು ಸಕಲ ಸುಜನರ
ಕಲುಷ ಕಳೆಯುವೆನೆಂದು ಬಹುಮೋದದಿಂದ
ಎಲರುಣಿ ಪರುವತದೊಳಗೆ ವಾಸನಾಗಿ
ಒಲಿದು ಪದುಮಾವತಿಯ ಕರ ಪಿಡಿದಂಥ ll 1 ll
ತೆತ್ತೀಸಕೋಟಿ ದೇವತೆಗಳು ತನ್ನ
ಸುತ್ತಲು ನಿಂತು ಪರಿಚಯವನು ಮಾಡೆ
ಎತ್ತ ನೋಡಲು ಸಿರಿಯು ಓ ಎನುತಿರೆ
ಚಿತ್ತಜನೈಯ್ಯನು ನಗುತ ನಿಂದಿರುವಂಥ ll 2 ll
ಭುವನತ್ರಯಂಗಳನೆಲ್ಲ ಲೀಲೆಯಿಂ
ಕಾವ
ಪವನವಂದಿತನೆ ಮಹಾನುಭಾವ
ನವ ಮೋಹನಾಂಗ ಶ್ರೀ ರಂಗೇಶವಿಟ್ಠಲ
ಜವನ ಬಾಧೆಯ ಬಿಡಿಸಯ್ಯಾ ಶ್ರೀಲೋಲ ll 3 ll
***