Showing posts with label ಶೇಷಾ ಭೂಧರನಿವಾಸಾ ಶ್ರೀ ಶ್ರೀನಿವಾಸಾ tulasiramadasa. Show all posts
Showing posts with label ಶೇಷಾ ಭೂಧರನಿವಾಸಾ ಶ್ರೀ ಶ್ರೀನಿವಾಸಾ tulasiramadasa. Show all posts

Sunday, 5 September 2021

ಶೇಷಾ ಭೂಧರನಿವಾಸಾ ಶ್ರೀ ಶ್ರೀನಿವಾಸಾ ankita tulasiramadasa

 ತುಳಸೀರಾಮದಾಸರು

ಶೇಷಾ ಭೂಧರನಿವಾಸಾ ಶ್ರೀ ಶ್ರೀನಿವಾಸಾ ಪ

ಶೇಷಶಯನ ಭವದೋಷರಹಿತ ಭಕ್ತಪೋಷಣಕೌಸ್ತುಭಭೂಷಾ ಅಶೇಷಾತ್ಮ ಶೇಷಾ1

ಅರಿದರಕರ ಕನಕಾಂಬರಧರ ಶ್ರೀ ಯಲಮೇಲ್‍ಮಂಗಾ ವಿಹಾರ ಉದಾರೀ ವಿಧೀರಾ 2

ವಿಷಚರಯುಗಮೃಗವೇಷಾ ದ್ವಿನೃಷಚವೇಷಾಪುರಿ ಕುಲದೂಷಾಮಾವಿಷಯ ಸಂತೋಷಾ3

ಕಾಮಜನಕ ತುಲಸೀರಾಮದಾಸ ಹಿತಕಾಮಿತಾರ್ಥವನೀವ ಓ ಶ್ರೀನಿವಾಸ 4

**