Showing posts with label ಅನುದಿನದಲಿ ಬಂದು ತನುವ ಸ್ನೇಹವ ಮಾಡಿ purandara vittala. Show all posts
Showing posts with label ಅನುದಿನದಲಿ ಬಂದು ತನುವ ಸ್ನೇಹವ ಮಾಡಿ purandara vittala. Show all posts

Tuesday 3 December 2019

ಅನುದಿನದಲಿ ಬಂದು ತನುವ ಸ್ನೇಹವ ಮಾಡಿ purandara vittala

ರಾಗ ಯದುಕುಲಕಾಂಭೋಜ ತ್ರಿಪುಟತಾಳ

ಅನುದಿನದಲಿ ಬಂದು ತನುವ ಸ್ನೇಹವ ಮಾಡಿ
ಎನ ಬಿಟ್ಟು ಹೋಗುತೀಯಾ ಜೀವವೆ ||ಪ||
ಘನ ಕೋಪದಿಂದ ಬಂದು ಯಮನವರೆಳೆದೊಯ್ವಾಗ
ನಿನ ಕೂಡಿನ್ನೇತರ ಮಾತೋ ಕಾಯವೆ ||ಅ||

ಬೆಲ್ಲದ ಹೇರಿನಂತೆ ಬೇಕಾದ ಬಂಧುಬಳಗ
ನಿಲ್ಲೋ ಮಾತು ಹೇಳುತೇನೋ ಜೀವವೆ
ನಿಲ್ಲಗೊಡದೆ ಬಂದು ಯಮನವರೆಳೆದೊಯ್ಯುವಾಗ
ಬೆಲ್ಲ ಬೇವಾಯಿತಲ್ಲೋ ಕಾಯವೆ

ಸಕ್ಕರೆ ಹೇರಿನಂತೆ ಸವಿದುಂಡು ಪಾಯಸ
ಬಿಟ್ಟಗಲಿ ಹೋಗುತೀಯ ಜೀವವೆ
ದಕ್ಕಗೊಡದೆ ಬಂದು ಯಮನವರೆಳೆದೊಯ್ಯುವಾಗ
ಸಕ್ಕರೆ ವಿಷವಾಯಿತಲ್ಲೋ ಕಾಯವೆ

ಅಂದಣದೈಶ್ವರ್ಯ ದಂಡಿಗೆ ಪಲ್ಲಕ್ಕಿ
ಮಂದಗಮನೆಯರು ಜೀವವೆ
ಮಂದಗಮನೆಯರು ಮಡದಿಮಕ್ಕಳಿನ್ನಾರೋ
ಬಂದಂತೆ ಹೋಗುವ್ಯೇನೋ ಕಾಯವೆ

ಸೋರುವೋ ಮನೆಯೊಳು ಮೌನ ಮಾನಾದಿಗಳು
ಬೇರಾಯಿತು ನಿನ್ನ ಮನಸು ಜೀವವೆ
ತೊರಗೊಡದೆ ಬಂದು ಯಮನವರೆಳೆದೊಯ್ಯುವಾಗ
ಯಾರಿಗೆ ಯಾರಿಲ್ಲೋ ಕಾಯವೆ

ನೀರ ಮೇಲಣ ಗುಳ್ಳೆ ತೋರಿ ಒಡೆದಂತೆ
ಹೇಳದೆ ಹೋಗುತೀಯೆ ಜೀವವೆ
ಈ ರೀತಿ ಸಭೆಗೆ ಬಂದು ಯಮನವರೆಳೆದೊಯ್ಯುವಾಗ
ಆರಿಗೆ ಪೇಳುವುದು ಕಾಯವೆ

ಮಾಳಿಗೆ ಮನೆ ಬಿಟ್ಟು ಜಾಳಿಗೆ ಹೊನ್ನ ಬಿಟ್ಟು
ಹೇಳದೆ ಹೋಗುತಿಯ ಜೀವವೆ
ಹೇಳಲಿ ಸಾರೆ ಬಂದು ಯಮನವರೆಳೆದೊಯ್ಯುವಾಗ
ಮಾಳಿಗೆ ಮನೆಯಿನ್ನೇಕೆ ಕಾಯವೆ

ಹುಟ್ಟಿದ್ದು ಹೊಲೆಯೂರು ಬೆಳೆದದ್ದು ಮೊಲೆಯೂರು
ಇಟ್ಟದ್ದು ಈ ಊರು ಎತ್ತಿದ್ದು ಕಾಡೂರು
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ್ನ
ಗಟ್ಯಾಗಿ ಪೂಜೆಯ ಮಾಡೋ ಕಾಯವೆ
***

pallavi

anudinadlai bandu tanuva snEhava mADi ena biTTu hOgutIyA jIvave

anupallavi

ghana kOpadinda bandu yamanavareLedoivAga nina kUDinnEtra mAtO kAyave

caraNam 1

bellada hErinante bEkAda bandhu baLaga nillO mAtu hELutEnO jIvave
nillagoDade bandu yamanavareLedoyyuvAga bella bEvAyitallO kAyave

caraNam 2

sakkare hErinante saviduNDu pAyasa biTTagali hOgutIyA jIvave
dakkakoDade bandu yamanavareLedoyyuvAga sakkare viSavAyitallO kAyave

caraNam 3

andaNaishvarya daNDige pallakki mandaga maneyaru jIvave
mandaga maneyaru maDadi makkaLinyArO bandante hOguvyEnO kAyave

caraNam 4

sOruvO maneyoLu mauna mAnAdigaLu bErAyitu ninna manasu jIvave
toragoDade bandu yamanavareLedoyyuvAga yArige yArillO kAyave

caraNam 5

nIra mElaNa guLLe tOri oDedante hELade hOgutIye jIvave
I rIti sabhege bandu yamanavareLedoyyuvAga mALige maneyinnake kAyave

caraNam 6

mALige mane biTTu jAlige honna biTTu hELade hOgutiyA jIvave
hELalIsare bandu yamanavareLedoyyuvAga mALige maneyinEke kAyave

caraNam 7

huTTiddu holeyUru beLedaddu moleyUru iTTaddu I Uru ettiddu kADUru
shrSTikoDeya namma purandara viTTalanna gaTyAgi pUjeya mADO kAyave
***

ಅನುದಿನದಲಿ ಬಂದು ತನುವ ಸೂರೆಯಗೊಂಡು |
ಎನಗೊಂದು ಮಾತ ಪೇಳೊ ಜೀವವೆ ! ಪ

ಘನಕೋಪದಲಿ ಬಂದು ಯಮನವರಳೆದೊಯ್ವಾಗ |ನಿನಕೂಡಿನ್ನೇತರ ಮಾತೂ ಕಾಯವೆ! ಅ.ಪ

ಬೆಲ್ಲದ ಹೇರಿನಂತೆ ಬೇಕಾದ ಬಂಧು - ಬಳಗ |ನಿಲ್ಲೊ ಮಾತನಾಡತೇನೆ ಜೀವವೆ ||ನಿಲ್ಲಗೊಡದೆ ಬಂದು ಯಮನವರೆಳೆದೊಯ್ವಾಗ |ಬೆಲ್ಲ ಬೇವಾಯಿತಲ್ಲೋ ಕಾಯವೆ ! 1

ಸತ್ಕರೆ ಹೇರಿನಂತೆ ಸವಿದುಂಡು ಪಾಯಸವ |ದಿಕ್ಕೆಟ್ಟು ಹೋಗುತೀಯೋ ಜೀವವೆ ||ದಕ್ಕಗೊಡದೆ ಬಂದು ಯಮನವರೆಳೆದೊಯ್ವಾಗ |ಸಕ್ಕರೆ ವಿಷವಾಯ್ತೋ ಕಾಯವೆ ! 2

ಅಂದಣದೈಶ್ವರ್ಯ ದಂಡಿಗೆ - ಪಲ್ಲಕ್ಕಿ |ಮಂದಗಮನೆಯರು ಜೀವವೆ ||ಮಂದಗಮನೆ ಯಾರೊ - ಮಡದಿ - ಮಕ್ಕಳು ಯಾರೋ -ಬಂದಂತೆ ಹೋಗ್ತೀನಿ ಕಾಯವೆ ! 3

ಸೋರುವ ಮನೆಯಲಿ ಧ್ಯಾನ - ಮೌನಾದಿಗಳು |ಬೇರಿತ್ತು ನಿನ್ನ ಮನಸು ಜೀವವೆ ||ನೀರಮೇಲಣ ಗುಳ್ಳೆ ತೋರಿ ಹಾರಿದಂತೆ |ಯಾರಿಗೆ ಯಾರಿಲ್ಲ ಕಾಯವೆ ! 4

ಹುಟ್ಟಿದ್ದು ಹೊಲೆಯೂರು ಬೆಳದದ್ದು ಮೊಲೆಯೂರು |ಇಟ್ಟದ್ದು ಈ ಊರು ಜೀವವೆ ||ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ |ಗಟ್ಟ ಪೂಜೆಯ ಮಾಡೊ ಕಾಯವೆ ! 5
***