..
kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಶುಕ್ರಾಚಾರ್ಯ ಸ್ತೋತ್ರ
ಶ್ರೀಶಪ್ರಿಯ ಭೃಗುವಂಶಜಾತ ಶುಕ್ರಾಚಾರ್ಯ
ನೀ ಸಲಹೋ ಎನ್ನನ್ನ ನಮೋ ನಮೋ ನಮಸ್ತೇ ಪ
ಶ್ರೀ ಪದ್ಮನಾಭಜನು ಸುಪವಿತ್ರ ವಿಧಿಸುತ
ಭೃಗು ಅಪತ್ಯನು ಕವಿ ತತ್ಪುತ್ರರತ್ನನು ಶುಕ್ರ
ಈ ಪುಣ್ಯ ಶ್ಲೋಕ ಶುಕ್ರಾಚಾರ್ಯ ಉಷನ ಶ್ರೀಪ
ಪ್ರಿಯನಿಗೆ ನಮೋ ಮಂತ್ರ ತಂತ್ರ ಮಹಾಕವಿಗೆ 1
ದೈತ್ಯಮಂತ್ರಿಯೇ ಸರ್ವಶಾಸ್ತ್ರ ಪ್ರವಾರ್ತಾರ
ದೈತ್ಯಾನಂ ಪರಮಂ ಗುರುಂ ಪ್ರಭುಸ್ತಾರಾ ಗಣಾನಾಂ
ಮಹಾದ್ಯುತಿಯೇ ನಮೋ ಎನ್ನ ಪೀಡೆಗಳ ಪರಿಹರಿಸಿ
ದಯದಿಪಾಲಿಸೆನ್ನನ್ನು ಹರಿಭಕ್ತ್ಯಾದಿಗಳಿತ್ತು 2
ಅಕಳಂಕ ಅಜಪಿತ ಪ್ರಸನ್ನ ಶ್ರೀನಿವಾಸನು
ಶುಕ್ರನೆಂದೆಣಿಸುವನು ಶೋಕ ರಹಿತನಾದ್ದರಿಂದ
ಶ್ರೀಕರಾರ್ಚಿತ ಈ ಶುಕ್ರ ನಿನ್ನೋಳ್ ಪ್ರಕಾಶಿಪನು
ಶುಕ್ರನ್ನ ಒಲಿಸೆನಗೆ ಶುಕ್ರಾಭಿದ ಮಹಾಯಶನೇ 3
***