ಪುರಂದರದಾಸರು
ನೀಚ ಮಾನವರಿಗೆಸಿರಿ ಬಂದರೇನು ಈಚಲ ಮರ ದಟ್ಟ ನೆರಳಾದರೇನು ಪ.
ನಾಚಿಕಿಲ್ಲದ ನರರು ಬಾಗಿದರೇನುಹೀಚಿನೊಳಿಹ ಫಲ ಹಣ್ಣಾದರೇನು ಅಪ
ಹೊಲೆಯರೊಳು ಪದುಮಿನಿ ಹೆಣ್ಣು ಹುಟ್ಟಿದÀರೇನುಮೊಲೆಯ ತೊರೆಯದ ನಾಯಿ ಈದರೇನುಕಳಹೀನ ಕಾಮಿನಿಗೆ ಕಾಂತಿ ಹೆಚ್ಚಿದರೇನುಬಿಲದೊಳಗೆ ಸರ್ಪ ಹೆಡೆಯೆತ್ತಿದರೇನು ? 1
ಕೋತಿಯ ಮೈಯೊಳುಭಾಂಡ ತುಳಕಲೇನುಹೋತಿನ ಗಡ್ಡವು ಹಿರಿದಾದರೇನುಯಾತಕೂ ಬಾರದ ಬದುಕು ಬಾಳಿದ್ದರೇನುರೀತಿಯಿಲ್ಲದ ನೆರೆಯ ಸ್ನೇಹವಿನ್ನೇನು 2
ರಕ್ಷಣೆಯಿಲ್ಲದ ರಾಜ ರಾಜಿಸಲೇನುಭಿಕ್ಷೆ ಹುಟ್ಟದ ಊರು ತುಂಬಿದ್ದರೇನುಲಕ್ಷ್ಯವಿಲ್ಲದವಗೆ ಲಕ್ಷ್ಯ ಬಂದರೇನುಪಕ್ಷಪಾತವಿಲ್ಲದವನ ಅಶ್ರಯವಿನ್ನೇನು 3
ಫಣಿಯ ಮಸ್ತಕದ ಮೇಲೆ ಮಣಿಯ ಮಿಂತಲೇನುಉಣಿಸಿ ದಣಿಸದ ಧನಿಯಿದ್ದರೇನುಋಣಗೇಡಿ ಮಕ್ಕಳ ರಟ್ಟೆ ಬಲಿತರೇನುಕ್ಷಣಚಿತ್ತವಿಲ್ಲದವನ ಸ್ಮರಣೆಯು ಇನ್ನೇನು 4
ಸಾಕಲಾರದಾತನ ಸತಿಯ ಮೋಹವೇನುಜೊತೆ ಮಾಡದಾ ಹಣ ಗಳಿಸದರೇನುಕಾಕುಮಾನವರ ಸೇವೆ ಮಾಡಿದರೇನುಬೇಕೆಂದು ಭಜಿಸಿರೋ ಪುರಂದರವಿಠಲನ 5
*********