Showing posts with label ಒಲ್ಲೆನವ್ವಾ ಲಕುಮಿಯ ನಲ್ಲ ಬಾರದಿದ್ದರೆ rangavittala. Show all posts
Showing posts with label ಒಲ್ಲೆನವ್ವಾ ಲಕುಮಿಯ ನಲ್ಲ ಬಾರದಿದ್ದರೆ rangavittala. Show all posts

Wednesday, 11 December 2019

ಒಲ್ಲೆನವ್ವಾ ಲಕುಮಿಯ ನಲ್ಲ ಬಾರದಿದ್ದರೆ ankita rangavittala

ಆಹರಿರಾಗ ಅಟ್ಟತಾಳ

ಒಲ್ಲೆನವ್ವಾ ಲಕುಮಿಯ ನಲ್ಲ ಬಾರದಿದ್ದರೆ
ತನು ಹೊರೆಯನೊಲ್ಲೆನವ್ವಾ ||ಪ||

ಹಾರ ಕೊರಳಿಗೆ ಭಾರ ಹುವ್ವಿನ
ಭಾರ ಸೈರಿಸಲಾರೆ ನೆ
ಮಾರನಯ್ಯನು ಬಾರದಿದ್ದರೆ
ಮಾರನಂಬಿಗೆ ಗುರಿಯ ಮಾಡಿ ||೧||

ಎಲ್ಲದೇವರ ವಲ್ಲಭನೆಂದು
ಒಲಿದೆ ಮನ ನಿಲ್ಲದೆ
ನಿಲ್ಲದೆ ರಂಗ ಪೋದ ಮಧುರೆಗೆ
ಬಿಲ್ಲಹಬ್ಬದ ನೆವನ ಮಾಡಿ ||೨||

ಮಂದಾನಿಲವ ಸಹಿಸಲಾಗದು
ನೊಂದೆ ಶುಕಪಿಕರವಗಳಿದ
ಚಂದ್ರಕಿರಣಗಳಿದಿ ಬೆಂದೆ ಇನ್ನೀ
ವೃಂದಾವನವೇಕವನನಗಲಿ ||೩||

ಮುನ್ನ ಆಡಿದ ಮಾತನು ಮರೆತು
ಎನ್ನ ವನದೊಳಗೀಡಾಡಿ
ವನ್ನಜಾಕ್ಷನು ಬಾರ ಪುರದ
ವನ್ನಿತೆಯರನು ಮೆಚ್ಚಿ ಪೋದ ||೪||

ವೊಂಗೊಳಲ ಧ್ವನಿಗೆ ಸಿಲುಕಿ
ಭಂಗಬಟ್ಟೆನಂಗಜನಿಂದಲಿ
ಪೆಂಗಳಿಗುಚಿತವಲ್ಲ
ರಂಗವಿಠಲನ ತೋರದಿದ್ದಡೆ ||೫||
*******