Showing posts with label ಶರಣು ನಿನ್ನ ಚರಣಗಳಿಗೆ ಭಾರತೀಶನೆ pranesha vittala SHARANU NINNA CHARANAGALIGE BHAARATEESHANE. Show all posts
Showing posts with label ಶರಣು ನಿನ್ನ ಚರಣಗಳಿಗೆ ಭಾರತೀಶನೆ pranesha vittala SHARANU NINNA CHARANAGALIGE BHAARATEESHANE. Show all posts

Saturday, 4 December 2021

ಶರಣು ನಿನ್ನ ಚರಣಗಳಿಗೆ ಭಾರತೀಶನೆ ankita pranesha vittala SHARANU NINNA CHARANAGALIGE BHAARATEESHANE



by ಪ್ರಾಣೇಶದಾಸರು
ಶರಣು ನಿನ್ನ ಚರಣಗಳಿಗೆ ಭಾರತೀಶನೆ |ಕರವಪಿಡಿದು ಸಲಹೋ ಬಿಡದೆ ಭಾರತೀಶನೆ ಪ

ಎಲ್ಲ ಕಡೆಗೆ ವ್ಯಾಪ್ತ ನೀನೆ ಭಾರತೀಶನೆ |ಅಲ್ಲಿ ವಿಷವ ಕುಡಿದೆಯೆಂದು ಭಾರತೀಶನೆ ||ಗೆಲ್ಲಿಸಿದೆಯೊ ಸರ್ವ ಸುರರ ಭಾರತೀಶನೆ |ಬಲ್ಲಿದನು ನಿನಗೆಣೆ ಯಾರೋ ಭಾರತೀಶನೆ1

ಅಂಜನಾ ಕುಮಾರನಾಗಿ ಭಾರತೀಶನೆ |ಕಂಜನಾಭನಂಘ್ರಿ ಭಜಿಸಿ ಭಾರತೀಶನೆ ||ಲಿಂಜದುದಧಿದಾಟಿ ಪೋಗಿ ಭಾರತೀಶನೆ |ಸಂಜಿ ಚರರ ಸಂಹರಿಸಿದೆಯೊ ಭಾರತೀಶನೆ2

ಕುಂತಿ ಜಠರದಿಂದ ಜನಿಸಿ ಭಾರತೀಶನೆ |ಹಂತ ಕೌರವರನ ತರಿದಿ ಭಾರತೀಶನೆ ||ಕಂತುಪಿತನ ಕರುಣ ಪಡೆದೆ ಭಾರತೀಶನೆ |ಅಂತಗಾಣೆ ನಿನ್ನ ಮಹಿಮೆಗೆ ಭಾರತೀಶನೆ 3

ಯತಿಯರೂಪಇಳಿಯೊಳಾಗಿ ಭಾರತೀಶ£ É |ಮತಿಯ ಸರ್ವ ಬುಧಂಗಿತ್ತೆ ಭಾರತೀಶನೆ ||ಸತತ ನಿನ್ನ ಪೂಜಿಪರಿಗೆ ಭಾರತೀಶನೆ |ಗತಿಯ ಕೊಡುವೆ ದೋಷ ಕಳೆದು ಭಾರತೀಶನೆ 4

ಘನ್ನ ಪ್ರಾಣೇಶ ವಿಠಲ ನಾಳೆ ಭಾರತೀಶನೆ |ಬಿನ್ನಪವನು ಲಾಲಿಸುವದೋ ಭಾರತೀಶನೆ ||ನಿನ್ನ ದಾಸನೆನಿಸಬೇಕೋ ಭಾರತೀಶನೆ |ಅನ್ಯ ವಿಷಯವೊಂದನೊಲ್ಲೆ ಭಾರತೀಶನೆ 5
*******