Showing posts with label ಬಾರೆ ಶ್ರೀ ಮಹಾಲಕ್ಷ್ಮಿದೇವಿಯೆ kamalanabha vittala. Show all posts
Showing posts with label ಬಾರೆ ಶ್ರೀ ಮಹಾಲಕ್ಷ್ಮಿದೇವಿಯೆ kamalanabha vittala. Show all posts

Friday, 27 December 2019

ಬಾರೆ ಶ್ರೀ ಮಹಾಲಕ್ಷ್ಮಿದೇವಿಯೆ ankita kamalanabha vittala

by ನಿಡಗುರುಕಿ ಜೀವೂಬಾಯಿ
ಬಾರೆ ಶ್ರೀ ಮಹಾಲಕ್ಷ್ಮಿದೇವಿಯೆ ಬೇಡುತಿರ್ಪೆವು ಪ

ಸಾರಸಾಕ್ಷಿಯೆ ಸರ್ಪವೇಣಿಯೆನಾರಿಯೆ ವೈಯ್ಯಾರಿಯೆ ಶ್ರೀಹರಿ ಸಹಿತದಿ ಅ.ಪಯಜÕನಾಮಕ ಹರಿಯ ರಾಣಿಯಜÕ ಇಂದಿರಾಹಿರಣ್ಯಹರಿಣಿಸುಜÕರಾದ ಜನರ ಪೊರೆವೆಸತ್ಯಾಶ್ರಿ ನಿತ್ಯಾಶ್ರೀ ಸುಗಂಧಿ ಸುಂದರಿ 1

ಪ್ರಾಜÕಸುಖಾ ಸುಗಂಧಿ ಸುಂದರಿವಿದ್ಯಾ ಶ್ರೀ ಸುಶೀಲದೇವಿಸುಜÕರಾದ ಜನರೊಳಿರಿಸುತಕ್ಷಣ ಈಕ್ಷಿಸು ಸುಲಕ್ಷಣ ದೇವಿಯೆ 2

ಶಾಂತಿಮಾಯೆಕೃತಿಯೆಇಂದಿರೆಶಾಂತಚಿತ್ತದಿ ಧ್ಯಾನಿಸುವರಾ ನಿ-ರಂತರದಿ ಪೊರೆವೆ ಜಯಮಂಗಳೆ ಉತ್ತುಂಗಳೆ ಶೃಂಗಾರ ರೂಪಳೆ 3

ನಗುತ ನಗುತ ಬಾರೆ ಬೇಗನಗಧರನ ಸನ್ನಿಧಿಗೆ ಈಗಖಗವಾಹನನ ಮಡದಿ ನಿನ್ನಅಡಿಗಳ ಪೂಜಿಪೆ ಸಡಗರದಿಂದಲಿ 4

ಪರಿಮಳೋದಕದಿಂದ ನಿನ್ನಚರಣಗಳನು ತೊಳೆದು ದಿವ್ಯವರಮಣಿಯ ಪೀಠದಲಿ ಕೂಡಿಸಿಪರಿಪರಿ ಪುಷ್ಪದಿ ಪೂಜಿಸಿ ನಲಿಯುವೆ 5

ಹರಿಯರಾಣಿ ನಿನಗೆ ದಿವ್ಯಹರಿದ್ರಾಕುಂಕುಮಾಕ್ಷತೆಗಳಿಂದವರಕಲ್ಹಾರಪೂವ್ಗಳಿಂದಲಿಸುರಗಿ ಶಾವಂತಿಗಿ ತುರುಬಿಗೆ ಮುಡಿಸುವೆ 6

ಎಣ್ಣೂರಿಗೆ ಹೋಳಿಗೆಯು ಕಡಬುಸಣ್ಣನಕ್ಕಿ ಶಾಲ್ಯನ್ನಗಳುಇನ್ನು ಬಗೆ ಬಗೆಯ ಭಕ್ಷಂಗಳನೂಸ್ವರ್ಣ ಪಾತ್ರೆಗಳಲ್ಲಿ ಇರಿಸುತ ನಲಿವರು 7

ಕ್ಷೀರಘೃತದಧ್ಯಾನ್ನ ಮಂಡಿಗೆಶಾವಿಗೆ ಪರಮಾನ್ನಗಳನುಶ್ರೀರಮೇಶನಿಗರ್ಪಿಸೆನುತಬೇಡುವೆ ಪಾಡುವೆ ಕೊಂಡಾಡುತ ನಲಿಯುವೆ 8

ಮುದ್ದು ಮಹಾಲಕ್ಷ್ಮಿ ನಿನಗೆಇಡಲಿ ದೋಸೆಗಳ ಸಹಿತಪದ್ಮನಾಭನಿಗರ್ಪಿಸೆನುತಶ್ರದ್ಧೆಯಿಂ ನಮಿಸುತ್ತಾ ಬೇಡುತಲಿರುವರು 9

ಗಂಗಾಜನಕನರಸಿ ನಿನಗೆಮಂಗಳಾರುತಿಗಳ ಮಾಡಿಹಿಂಗಿಸುವೆ ಪಾಪಗಳೆನುತಾವಂದಿಸಿ ಸಾಷ್ಟಾಂಗದಿಂ ಚಂದದಿ ಪ್ರಾರ್ಥಿಪೆ 10

ಕರ್ಪೂರದ ಅಡಿಕೆ ವೀಳ್ಯಅರ್ಪಿಸುತಲಿ ನಿನ್ನ ಪೂಜಿಸಿಮುಪ್ಪುರಾಂತಕ ಕಮಲನಾಭವಿಠ್ಠಲ ವಿಠ್ಠಲ ವಿಠ್ಠಲನರಸಿಯೆ 11
*******