Showing posts with label ಎಲ್ಯಾಡಿಲ್ಲಿಗೆ ಬಂದನೆ ಈತನು ಕೌಸಲ್ಯಾದೇವಿಯ bheemesha krishna ELYAADILLIGE BANDANE EETANU KAUSALYADEVIYA. Show all posts
Showing posts with label ಎಲ್ಯಾಡಿಲ್ಲಿಗೆ ಬಂದನೆ ಈತನು ಕೌಸಲ್ಯಾದೇವಿಯ bheemesha krishna ELYAADILLIGE BANDANE EETANU KAUSALYADEVIYA. Show all posts

Sunday, 5 December 2021

ಎಲ್ಯಾಡಿಲ್ಲಿಗೆ ಬಂದನೆ ಈತನು ಕೌಸಲ್ಯಾದೇವಿಯ ankita bheemesha krishna ELYAADILLIGE BANDANE EETANU KAUSALYADEVIYA



ಎಲ್ಲ್ಯಾಡಿಲ್ಲಿಗೆ ಬಂದನೆ ಈತನು ಕೌ-

ಸಲ್ಯಾದೇವಿಯ ಕಂದನೆ

ಎಲ್ಲ್ಯಾಡಿಲ್ಲಿಗೆ ಬಂದ ಚೆಲ್ವೆ ಕೌಸಲ್ಯೆ ಕಂದ

ಫÀುಲ್ಲಲೋಚನೆ ಜಾನಕಿ ಲಕ್ಷ್ಮಣರನೆ ಕೂಡಿ ಪ


ಸನಕಾದಿ ಸುರರ್ವಂದಿತ ಮಾಣಿಕ್ಯ ರತ್ನ ಪದಕ ಪಚ್ಛದಿ ಭೂಷಿತ

ಜನಕ ಜಾನ್ಹವಿ ಜಾನಕಿ ರಾಮರಿಬ್ಬರು

ವನಕೆ ಬಂದ್ವಾರಿಧಿ ಕಟ್ಟಿ ವಾನರನ ಕೂಡೆಲ್ಯಾಡಿಲ್ಲಿಗೆ ಬಂದನೆ 1


ಕಂಡು ಶೂರ್ಪಣಖಿಯ ನಾಸಿಕ ಭಂಗ ಮಾಡಿ ಮಾರೀಚನ್ವಧೆ

ಮಂಡೋದರೀಪತಿ ಮರ್ದಕನಾಗಿದ್ದ

ಬಂದಯೋಧ್ಯವನಾಳಿ ಭಕ್ತರ ಸಲಹೊ ದಾತ್ಯೆಲ್ಲ್ಯಾಡಿಲ್ಲಿಗೆ ಬಂದನೆ 2


ಬಿಲ್ಲುಪಿಡಿದು ನಿಂತನೆ ಭೀಮೇಶಕೃಷ್ಣ ಬಲ್ಲಿದ ಬಲವಂತನೆ

ಕಲ್ಲ್ಹೆಣ್ಣು ಮಾಡಿದ ಕರುಣಕೃಪಾಳೋ ಕೈ-

ವಲ್ಯದಾಯಕ ಸೀತಾವಲ್ಲಭೆಂದೆನಿಸುವೋನೆಲ್ಲಾಡಿಲ್ಲಿಗೆ ಬಂದನೆ 3

****