Showing posts with label ಸಣ್ಣವನಿವನಾರಮ್ಮ ಪೇಳೆಲೆ ತಂಗಿ purandara vittala. Show all posts
Showing posts with label ಸಣ್ಣವನಿವನಾರಮ್ಮ ಪೇಳೆಲೆ ತಂಗಿ purandara vittala. Show all posts

Saturday, 7 December 2019

ಸಣ್ಣವನಿವನಾರಮ್ಮ ಪೇಳೆಲೆ ತಂಗಿ purandara vittala

ರಾಗ ಶಂಕರಾಭರಣ ಆದಿತಾಳ

ಸಣ್ಣವನಿವನಾರಮ್ಮ ಪೇಳೆಲೆ ತಂಗಿ ||ಪ||
ಕಾಣದ ಮಾಣಿಕ್ಯವ ಕಂಡೆನು ಇಂದಿಲ್ಲಿ ||

ಒಬ್ಬರ ಸುತನಲ್ಲ ಭಕ್ತವತ್ಸಲನಕ್ಕ
ಉಬ್ಬಿ ನೆನೆವರಲಿ ಸುತ್ತಿ ನಲಿದಾಡುವ ||

ಭವಾದಿಗಳ ತಾತ ಭವಕೆ ತಾರಕನೀತ
ಧವಳಗಂಗೆಯ ಪೆತ್ತ ಶ್ರೀವತ್ಸದಿಂದೊಪ್ಪುವ ||

ಮುದ್ದು ಸುರಿವ ಬಾಲ ಸಜ್ಜನಪರಿಪಾಲ
ಹದ್ದುವಾಹನನೆ ಅಕ್ಕ ತಂದೆ ಪುರಂದರವಿಠಲ ||
***

pallavi

saNNavanivaramma pELele tangi

anupallavi

kANada mANikyava kaNDenu indilli

caraNam 1

obbara sutanalla bhaktavatsalanakka ubbi nenevarali sutti nalidADuva

caraNam 2

bhavAdigaLa tAta bhavake tArakanIta dhavaLagangeya petta shrIvatsadindoppuva
muddu suriva bAla sajjana paripAla haddu vAhanane akka tande puradara viTTala
***