Showing posts with label ಶರಣು ಭಾಸ್ಕರಕುಲಶರಧಿ ಪೂರ್ಣಸೋಮ prasannavenkata. Show all posts
Showing posts with label ಶರಣು ಭಾಸ್ಕರಕುಲಶರಧಿ ಪೂರ್ಣಸೋಮ prasannavenkata. Show all posts

Sunday, 17 November 2019

ಶರಣು ಭಾಸ್ಕರಕುಲಶರಧಿ ಪೂರ್ಣಸೋಮ ankita prasannavenkata

by ಪ್ರಸನ್ನವೆಂಕಟದಾಸರು
ಶರಣು ಭಾಸ್ಕರಕುಲಶರಧಿ ಪೂರ್ಣಸೋಮಕರುಣಾಮೃತ ಪೂರ್ಣರಾಮ ಪ.

ನೃಪದಶರಥನ ತ್ಯಜಿಸಿ ಸೌಮಿತ್ರನ ಕೂಡಿವಿಪಿನದಿ ಸೀತೆ ಕಾಣದೆ ನೀಕಪಿಗಳ ನೆರಹಿ ಅಂಬುಧಿಗೆ ದಾರಿಯ ಬಲಿದೆಕಪಟಿ ರಾವಣನ ಸವರಿದೆ 1

ನಿಜರಾಣಿಯ ಯಜಿÕಯ ಮುಖದಲಿ ಕೈಕೊಂಡುಸುಜನವಿಭೀಷಣನ ಹೊರೆದೆತ್ರಿಜಗವಂದಿತ ಪುಷ್ಪಕವನೇರಿ ಬಂದು ಅನುಜ ಭರತನ ಕಾಯ್ದೆ ಅಂದು 2

ಹಲವು ಸಾಸಿರ ಅಬ್ದ ಅಯೋಧ್ಯೆಯನಾಳ್ದೆ ಅನಿಲತನಯನ ಸೇವೆಗೊಲಿದೆಸುಲಭದಿ ಮುಕ್ತಿ ತೋರಿದೆ ಪ್ರಸನ್ವೆಂಕಟನಿಲಯಭಕ್ತರಿಗೆ ಇತ್ತೆತುಷ್ಟಿ3
*******