Showing posts with label ಪೊರೆಯೊ ಶಂಕರಾ ಕರುಣಾ ಸಾಗರ govinda. Show all posts
Showing posts with label ಪೊರೆಯೊ ಶಂಕರಾ ಕರುಣಾ ಸಾಗರ govinda. Show all posts

Wednesday, 13 November 2019

ಪೊರೆಯೊ ಶಂಕರಾ ಕರುಣಾ ಸಾಗರ ankita govinda

by ಗೋವಿಂದದಾಸ
ಪೊರೆಯೊ ಶಂಕರಾ | ಕರುಣಾ ಸಾಗರ |ದುರಿತಸಂಹರ | ಶಿವೆ ಮನೋಹರ ಪ

ಕರಿಚರ್ಮಾಂಬರ |ಪೊರೆದಿಗಂಬರ ||ಗರಳಕಂಧರ | ಚಂದ್ರಶೇಖರ 1

ನಿಟಿಲನೇತ್ರನೆ | ಜಟಾಧಾರನೆ |ನಟ ಮಹೇಶನೇ | ಸ್ಮರಿಪೆ ನಿನ್ನನೆ 2

ವೃಷಭವಾಹನಾ | ಭಸ್ಮಲೇಪನ |ಪಶುಪತೀಶನಾ | ನುತಿಸೋ ಅನುದಿನ3

ಉರಗಕುಂಡಲ|ನರರುಂಡಮಾಲ |ಕರದೊಳ್ ತ್ರಿಶೂಲ | ಕೈಲಾಸ ಗಿರಿಪಾಲ 4

ಅಂಧಕಗಜಾಸುರ | ರೆಂದೆಂಬ ದುರುಳರ |ಹೊಂದಿಸಿ ತ್ರಿಪುರರ | ಜಗದಿ ಮೆರೆದನೀಶ್ವರ5

ದೇವ ದೇವೇಶನಾ | ಸೇವಿಸುತಿರೆ ಮನ |ಕಾಯ್ವನನುದಿನ | ಗೋವಿಂದದಾಸನ 6
********