Showing posts with label ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ mahipati. Show all posts
Showing posts with label ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ mahipati. Show all posts

Wednesday, 11 December 2019

ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ ankita mahipati

ಬಿಹಾಗ್ ರಾಗ ದಾದರಾ ತಾಳ

ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ ಗುರುಮೂರ್ತಿಯಿಂದ
ನಿತ್ಯವಾಗಿ ಪೂರ್ಣಬೆರೆತು ಕೂಡುವಾ ಬನ್ನಿ ಗುರ್ತದಿಂದ ||ಧ್ರುವ||

ಸೂರ್ಯನಿಲ್ಲದೆ ಸುಪ್ರಕಾಶ ತುಂಬಿದೆ ಹೇಳತೀನ
ತೂರ್ಯಾವಸ್ಥೆಯೊಳು ಬೆರೆದು ಕೂಡಿದೆ ಜ್ಞಾನಿಬಲ್ಲ ಖೂನ
ಬರಿಯ ಮಾತನಾಡಿ ಹೊರೆಯ ಹೇಳುವದಲ್ಲ ಅರಹು ಸ್ಥಾನ
ಪರಿಯಾಯದಿಂದ ಪರಿಣಮಿಸಿ ನೋಡಿ ಪರಮಪ್ರಾಣ ||೧||

ಚಂದ್ರನಿಲ್ಲದೆ ಬೆಳದಿಂಗಳು ಬಿದ್ದಿದೆ ಬಹಳ
ಇಂದ್ರಾದಿಗಳೆಲ್ಲ ಹರುಷದಿ ನೋಡುವರು ಸರ್ವಕಾಲ
ಸುಂದರವಾದ ಸುವಸ್ತು ಒಳಗೊಂಡಿದೆ ಅಚಲ
ಸಾಂದ್ರವಾಗಿ ಸುಖ ತುಂಬಿ ತುಳುಕುತಿದೆ ಥಳ ಥಳ ||೨||

ಮನದ ಕೊನೆಯಲಿದ್ದ ಘನಸುಖ ನೋಡಿರೋ ನೆನೆದು ಬೇಗ
ಸ್ವಾನುಭವದಲನುಭವಿಸುವದು ಬ್ರಹ್ಮಭೋಗ
ನಾ ನೀನೆಂಬುವ ಮಾತು ಏನು ತಾಳುವದಲ್ಲ ರಾಜಯೋಗ
ದೀನ ಮಹಿಪತಿಸ್ವಾಮಿ ತಾನೆತಾನಾದ ಸದ್ಗುರುವೀಗ ||೩||
******

 ಕಾಖಂಡಕಿ ಶ್ರೀ ಮಹಿಪತಿರಾಯರು

ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ ಗುರುಮೂರ್ತಿಯಿಂದ ನಿರ್ತವಾಗಿ ಪೂರ್ಣಬೆರ್ತು ಕೂಡುವಾ ಬನ್ನಿ ಗುರ್ತದಿಂದ ಧ್ರುವ ಸೂರ್ಯನಿಲ್ಲದ ಸೂಪ್ರಕಾಶ ತುಂಬೇದ ಹೇಳಲೇನ ತೂರ್ಯಾವಸ್ಥೆಯೊಳು ಬೆರೆದು ಕೂಡಿದ ಜ್ಞಾನಿಬಲ್ಲ ಖೂನ ಬರಿಯ ಮಾತನಾಡಿ ಹೊರಿಯ ಹೇಳುವದಲ್ಲ ಅರುವ್ಹೆಸ್ಥಾನ ಪರಿಯಾಯದಿಂದ ಪರಿಣಿಮಿಸಿ ನೋಡಿ ಪರಮ ಪ್ರಾಣ 1 

ಚಂದ್ರನಿಲ್ಲದೆ ಬೆಳದಿಂಗಲು ಬಿದ್ದದ ಬಲು ಬಹಳ ಇಂದ್ರಾದಿಕರೆಲ್ಲ ಹರುಷದಿ ನೋಡುವರು ಸರ್ವಕಾಲ ಸುಂದ್ರವಾದ ಸುವಸ್ತುವಳಗೊಂದದೆ ಅಚಲ ಸಾಂದ್ರವಾದ ಸುಖತುಂಬಿ ತುಳುಕತದೆ ಥಳ ಥಳ 2 

ಮನದ ಕೊನೆಯಲಿದ್ದ ಘನಸುಖ ನೋಡಿರೋ ನೆನೆದು ಬ್ಯಾಗ ಸ್ವಾನುಭವದಲನುಭವಿಸುವದು ಬ್ರಹ್ಮಭೋಗ ನಾ ನೀನೆಂಬುವ ಮಾತು ಏನು ತಾಳುವದಲ್ಲ ರಾಜಯೋಗ ದೀನ ಮಹಿಪತಿಗೆ ತಾನೆತಾನಾದ ಸದ್ಗುರುವೀಗ 3

***