Showing posts with label ಮನವೆ ಮರೆವರೇನೊ ಹರಿಯಾ ಬಹು ಜನುಮಗಳಲಿ jagannatha vittala MANAVE MAREVARENO HARIYA BAHU JANUAGALALI. Show all posts
Showing posts with label ಮನವೆ ಮರೆವರೇನೊ ಹರಿಯಾ ಬಹು ಜನುಮಗಳಲಿ jagannatha vittala MANAVE MAREVARENO HARIYA BAHU JANUAGALALI. Show all posts

Friday, 17 December 2021

ಮನವೆ ಮರೆವರೇನೊ ಹರಿಯಾ ಬಹು ಜನುಮಗಳಲಿ ankita jagannatha vittala MANAVE MAREVARENO HARIYA BAHU JANUAGALALI



by ಜಗನ್ನಾಥದಾಸರು

ಮನವೆ ಮರೆವರೇನೊ ಹರಿಯ ಬಹು ||ಪ||

ಜನುಮಗಳಲಿ ಪಟ್ಟ ಬವಣೆಗಳರಿಯ ||ಅ.ಪ||

ವಿಷಯ ಚಿಂತನೆ ಮಾಡೆ ಸಲ್ಲ ಮೇಷ
ವೃಷಣನಾದನು ಪೌಲೋಮಿಯ ನಲ್ಲ
ಝಷಕೇತುವಿನ ಮೇಳಹೊಲ್ಲ ನಿ-
ರಶನನಾಗೊ ಯಮರಾಯ ಎಂದೆಂದು ಕೊಲ್ಲ ||೧||

ಧನವೆ ಜೀವನವೆಂಬೆ ನೀನು, ಸುಯೋ-
ಧನನ ನೋಡು, ಧನದಿಂದ ಏನಾದ ಕೊನೆಗೆ
ಅನಿರುದ್ಧದೇವನ ಮನೆಗೆ ಪೋಪ
ಘನವಿಜ್ಞಾನ ಸಂಪಾದಿಸೊ ಕೊನೆಗೆ ||೨||

ಹರಿದಾಸನಾಗಿ ನೀ ಬಾಳೋ , ಗುರು-
ಹಿರಿಯರ ಪಾದಕಮಲಕೆ ನೀ ಬೀಳೊ
ನರರ ನಿಂದಾಸ್ತುತಿ ತಾಳೋ, ದೇಹ
ಸ್ಥಿರವಲ್ಲ ಸಂಸಾರ ಬಲು ಹೇಯ ಕೇಳೊ ||೩||

ಜಿತನಾಗಿ ಪೇಳುವೆ ಸೊಲ್ಲ, ಹರಿ-
ಕಥೆಯಲ್ಲಿ ನಿರತನಾಗಿರು, ಲೋಹಕಲ್ಲ
ಪ್ರತಿಮೆ ಪೂಜಿಸಲಲ್ಲೇನಿಲ್ಲ , ಪರೀ-
ಕ್ಷಿತನೆಂಬ ರಾಯ ಈ ಮಹಿಮೆಯ ಬಲ್ಲ ||

ಹಲವು ತೀರ್ಥಗಳಲ್ಲಿ ಸ್ನಾನ ಮಾಡೆ
ಮಲ ಪೋಪುದಲ್ಲದೆ ನಿರ್ಮಲ ಜ್ಞಾನ
ಫಲಿಸದೆಂದೆಂದಿಗು ಹೀನ ಬುದ್ಧಿ
ಕಳೆದು ಸೇವಿಸು ಸಾಧುಗಳನನುದಿನ ||೫||

ಜ್ಞಾನೇಚ್ಛಾಕ್ರಿಯಾಶಕ್ತಿ ತ್ರಯವ ತಿಳಿ-
ದಾನಂದಪಡು, ಬಯಸದಿರು ಉಭಯವ
ಸಾನುರಾಗದಿ ಬೇಡು ದಯವ ನೀ ಮ-
ದ್ದಾನೆಯಂದದಿ ಸಂಚರಿಸು ಬಿಟ್ಟು ಭಯವ ||೬||

ಭಾವಕ್ರಿಯೆ ದ್ರವ್ಯಾದ್ವೈತ ನೀ-
ನಾವಾಗ ಚಿಂತಿಸೊ , ಭೌಮಾದಿಭೂತ
ಜೀವಗಳು ಜಗನ್ನಾಥವಿಠಲ-
ಗಾವಾಸಯೋಗ್ಯವೆಂದರಿಯೊ ಸಂತತ ||೭||

***

pallavi

manavE marevarEnO hariyE bahu

anupallavi

janumagaLali paTTa bhavanegaLariya

caraNam 1

viSaya cintane mADE salla mEsha vraSaNa nAdanu paulOmiya nalla
jhasakEtuvina mELa holla nI ratananAgO yamarAya endendu kolla

caraNam 2

dhanava jIvanavembE nInu suyOdhana nODu dhanadinda EnAda konege
aniruddha dEvana manega pOpa ghana vijnAna sampAdisO konege

caraNam 3

haridAsanAni nI bALO guruhiriyara pAda kamalake nI bILO
narara nindAstuti tALO dEha sthiravalla samsAra baluhEya kELO

caraNam 4

jitavAgi pELuva solla harikatheyelli niratanASgiru lOha kalla
pratime pUjisalallE nillA parIkSitanemba rAya I mahimeya balla

caraNam 5

halavu tIrthagaLalli snAna mADE mala pOpudalladE nirmala jnAna
phalisadendendigu hIna buddhi kaLedu sEvisu sAdhugaLanu dina

caraNam 6

jnAnEccA kriyA shakti trayava tiLidAnandavaru bhayasadiru ubhayava
sAnurAgavi bEDu dayava nI maddAneyendadi sancarisu biTTu bhayava

caraNam 7

bhAvakriye dravyAdvaita nInAvAga cintisO bhaumAdi bhUta
jIvegaLu jagannAtha viThala gAvAsa yOgyavendariyO santata
***


ರಾಗ ಯರಕಲ ಕಾಂಬೋಧಿ (ಕಾಫಿ) 
ಅಟತಾಳ(ತೀನ್ ತಾಲ್) (raga, taala may differ in audio)

ಮನವೇ ಮರೆವರೇನೊ ಹರಿಯಾ ಪ

ಬಹು ಜನುಮಗಳಲ್ಲಿ ಬಟ್ಟ ಬವಣಿಗಳರಿಯಾ ಅ.ಪ.

ವಿಷಯ ಚಿಂತನೆ ಮಾಡಸಲ್ಲ ಮೇಷ
ವೃಷನನಾದನು ಹಿಂದೆ ಪೌಲೋಮಿ ನಲ್ಲ
ಝಷ ಕೇತುವಿನ ಮ್ಯಾಳ ಹೊಲ್ಲ ನಿರಾ
ಶಿಷನಾಗು ಯಮರಾಯನೆಂದೆಂದೂ ಕೊಲ್ಲ 1

ಧನವೆ ಜೀವನವೆಂಬಿ ನಿನಗೆ ಸುಯೋ
ಧನ ನೋಡು ಧನದಿಂದ ಏನಾದ ಕೊನೆಗೆ
ಅನಿರುದ್ಧ ದೇವನ ಮನೆಗೆ ಪೋಪ
ಘನ ವಿe್ಞÁನವನೆ ಸಂಪಾದಿಸು ಕೊನೆಗೆ 2

ಹರಿದಾಸನಾಗಿ ಬಾಳೋ ಗುರು
ಹಿರಿಯರ ಪಾದಕಮಲಕೆ ನೀ ಬೀಳೋ
ನರರ ನಿಂದಾಸ್ತುತಿ ತಾಳೋ ದೇಹ
ಸ್ಥಿರವಲ್ಲ ಸಂಸಾರ ಬಹು ಹೇಯ ಕೇಳೋ 3

ಹಲವು ತೀರ್ಥಗಳಲ್ಲಿ ಸ್ನಾನ ಮಾಡೆ
ಮಲ ಪೋಯಿತಲ್ಲದೆ ನಿರ್ಮಲ e್ಞÁನ
ಫಲಿಸದೆಂದಿಗು ಹೀನ ಬುದ್ಧಿ
ಕಳೆದು ಸೇವಿಸು ಸಾಧುಗಳನನುದಿನ 4

ಜಿತವಾಗಿ ಪೇಳುವೆ ಸೊಲ್ಲಾ ಹರಿ
ಕಥೆಯಲ್ಲಿ ನಿರತನಾಗಿರು ಲೋಹ ಕಲ್ಲಾ
ಪ್ರತಿಮೆ ಪೂಜಿಸಿದರೇ ನಿಲ್ಲ ಪರೀ
ಕ್ಷಿತನೆಂಬ ರಾಯ ಈ ಮಹಿಮೆಯ ಬಲ್ಲಾ 5

e್ಞÁನೇಚ್ಛಾ ಕ್ರಿಯಾ ಶಕ್ತಿ ತ್ರಯವಾ ತಿಳಿ
ದಾನಂದ ಪಡು ಬಯಸದಿರುಭಯವಾ
ಸಾನುರಾಗದಿ ಬೇಡು ದಯವಾ ನೀ ಮ
ದ್ದಾನೆಯಂದದಿ ಚರಿಸು ಬಿಟ್ಟು ಭಯವಾ 6

ಭಾವ ಕ್ರಿಯಾ ದ್ರವ್ಯಾದ್ವೈತ ತ್ರಯ
ಆವಾಗ ಚಿಂತಿಸು ಭೂಮ್ಯಾದಿ ಭೂತಾ
ಜೀವಿಗಳೊಳು ಜಗನ್ನಾಥ ವಿಠಲ
ಗಾವಾಸ ಯೋಗ್ಯವೆಂದರಿಯೋ ಸಂತತಾ 7
********